ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೆಯ ದಿನವೂ ಸೆನ್ಸೆಕ್ಸ್ ಇಳಿಕೆ

Last Updated 28 ಜುಲೈ 2021, 15:58 IST
ಅಕ್ಷರ ಗಾತ್ರ

ಮುಂಬೈ: ಬುಧವಾರದ ವಹಿವಾಟಿನಲ್ಲಿ ಒಂದು ಹಂತದಲ್ಲಿ 700 ಅಂಶಕ್ಕಿಂತ ಹೆಚ್ಚಿನ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ನಂತರ ತುಸು ಚೇತರಿಕೆ ಕಂಡುಕೊಂಡಿತು. ದಿನದ ಅಂತ್ಯಕ್ಕೆ 135 ಅಂಶ ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿತು.

ಬ್ಯಾಂಕಿಂಗ್, ಇಂಧನ ಮತ್ತು ಆಟೊಮೊಬೈಲ್‌ ವಲಯದ ಷೇರುಗಳು ಕುಸಿತ ದಾಖಲಿಸಿದವು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 37 ಅಂಶ ಕುಸಿಯಿತು.

‘ಚೀನಾದ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಇದರ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಕೂಡ ನಕಾರಾತ್ಮಕ ವಹಿವಾಟು ನಡೆಯಿತು. ಇದು ದೇಶಿ ಮಾರುಕಟ್ಟೆಗಳ ಮೇಲೆಯೂ ಪರಿಣಾಮ ಬೀರಿತು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೇಳಿದರು.

ಹಣಕಾಸು ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಆದರೆ, ಯುರೋಪಿನ ಮಾರುಕಟ್ಟೆಗಳಿಂದ ಸಕಾರಾತ್ಮಕ ವರ್ತಮಾನ ಬಂದಿದ್ದು, ಷೇರು ಮೌಲ್ಯ ಕುಸಿದ ಸಂದರ್ಭದಲ್ಲಿ ಒಂದಿಷ್ಟು ಖರೀದಿಸಬೇಕು ಎಂಬ ಧೋರಣೆ ದಿನದ ಅಂತ್ಯದ ಸುಮಾರಿಗೆ ಸೂಚ್ಯಂಕ ತುಸು ಚೇತರಿಸಿಕೊಳ್ಳಲು ಕಾಣಲು ನೆರವಾದವು ಎಂದು ಅವರು ತಿಳಿಸಿದರು.

ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 9 ಪೈಸೆ ಹೆಚ್ಚಳವಾಗಿದ್ದು, 74.38ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT