ಸೋಮವಾರ, ಆಗಸ್ಟ್ 3, 2020
23 °C

ಸೂಚ್ಯಂಕ 354 ಅಂಶ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿ ಅನೇಕ ಕಾರಣಗಳಿಗೆ ಮಾರಾಟ ಒತ್ತಡ ಕಂಡು ಬಂದಿದ್ದರಿಂದ ಸಂವೇದಿ ಸೂಚ್ಯಂಕವು 354 ಅಂಶಗಳಷ್ಟು ಕುಸಿತ ದಾಖಲಿಸಿತು.

ಜಾಗತಿಕ ನಿರಾಶಾದಾಯಕ ವಿದ್ಯಮಾನಗಳ ಕಾರಣಕ್ಕೆ ಎಚ್‌ಡಿಎಫ್‌ಸಿ (ಶೇ 2.07) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ (ಶೇ 1.96) ಷೇರುಗಳಲ್ಲಿ ಭಾರಿ ಪ್ರಮಾಣದ ಮಾರಾಟ ಒತ್ತಡ ಕಂಡು ಬಂದಿತು. ಖಾಸಗಿ ಹೂಡಿಕೆಯ ದೈತ್ಯ ಸಂಸ್ಥೆ ಕೆಕೆಆರ್‌, ಈ ಎರಡೂ ಕಂಪನಿಗಳಲ್ಲಿನ ತನ್ನ ಕೆಲ ಪಾಲು ಬಂಡವಾಳವನ್ನು ಮಾರಾಟ ಮಾಡಲಿದೆ ಎನ್ನುವ ವರದಿಯ ಫಲವಾಗಿ ಈ ಮಾರಾಟ ಒತ್ತಡ ಕಂಡುಬಂದಿತು.

ಜಾಗತಿಕ ಆರ್ಥಿಕತೆಯ ಬೆಳವಣಿಗೆ ದರವು 2019ರಲ್ಲಿ ಶೇ 3.3 ರಷ್ಟಾಗಿರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವಿಶ್ವ ಆರ್ಥಿಕ ಮುನ್ನೋಟದಲ್ಲಿ ಅಂದಾಜಿಸಲಾಗಿದೆ. ಇದು ಕೂಡ ಷೇರು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ
ಬೀರಿತು. ಯುರೋಪ್‌ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಆಮದು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆದರಿಕೆಯೂ ಜಾಗತಿಕ ಮಟ್ಟದಲ್ಲಿ ಷೇರು ಬೆಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

ಸಂವೇದಿ ಸೂಚ್ಯಂಕವು 354 ಅಂಶ (ಶೇ 0.91) ಕುಸಿತ ಕಂಡು 38,585 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’, 87 ಅಂಶಗಳಿಗೆ ಎರವಾಗಿ 11,584 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಕಂಡಿತು.

ನಷ್ಟ ಕಂಡ ಷೇರುಗಳು: ಭಾರ್ತಿ ಏರ್‌ಟೆಲ್‌, ಏಷಿಯನ್‌ ಪೇಂಟ್ಸ್‌, ಟಿಸಿಎಸ್‌, ಎಚ್‌ಸಿಎಲ್‌ ಟೆಕ್‌, ಟಾಟಾ ಸ್ಟೀಲ್‌, ಎಸ್‌ಬಿಐ, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಹೀರೊ ಮೋಟೊಕಾರ್ಪ್‌ಗಳ ಷೇರುಗಳು ಶೇ 3.28ರವರೆಗೆ ಕುಸಿತ ಕಂಡವು.

ಲಾಭ ಮಾಡಿದ ಷೇರುಗಳು: ಟಾಟಾ ಮೋಟರ್ಸ್‌, ಎಚ್‌ಯುಎಲ್‌, ಕೋಟಕ್‌ ಬ್ಯಾಂಕ್‌, ಕೋಲ್‌ ಇಂಡಿಯಾ, ಸನ್‌ ಫಾರ್ಮಾ, ಬಜಾಜ್‌ ಆಟೊ ಮತ್ತು ಒಎನ್‌ಜಿಸಿ ಷೇರುಗಳು ಶೇ 4.68ರವರೆಗೆ ಲಾಭ ಬಾಚಿಕೊಂಡವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು