ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ಳಿ ದರ ಸಾರ್ವಕಾಲಿಕ ಗರಿಷ್ಠ

Published 29 ಮೇ 2024, 14:40 IST
Last Updated 29 ಮೇ 2024, 14:40 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಮೂರನೇ ದಿನವಾದ ಬುಧವಾರವೂ ಬೆಳ್ಳಿ ದರ ಏರಿಕೆಯಾಗಿದ್ದು, ಪ್ರತಿ ಕೆ.ಜಿ ಧಾರಣೆಯು ₹1 ಲಕ್ಷದತ್ತ ಸಮೀಪಿಸುತ್ತಿದೆ.

ಕೆ.ಜಿ ಬೆಳ್ಳಿ ದರವು ₹1,150 ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹97,100ಕ್ಕೆ ತಲುಪಿದೆ.

ಚಿನ್ನದ ದರವು 10 ಗ್ರಾಂ ಗೆ ₹250 ಹೆಚ್ಚಳವಾಗಿ ₹73,200ಕ್ಕೆ ಮುಟ್ಟಿದೆ.

‘ಕೆಂಪು ಸಮುದ್ರದ ಬಿಕ್ಕಟ್ಟು ಮುಂದುವರಿದಿದೆ. ಹಾಗಾಗಿ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿದ್ದಾರೆ. ಹಾಗಾಗಿ, ಚಿನ್ನದ ದರವು ಏರಿಕೆಯಾಗುತ್ತಿದೆ’ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT