ಗುರುವಾರ , ಡಿಸೆಂಬರ್ 12, 2019
26 °C

ಏಪ್ರಿಲ್‌ನಿಂದ ಸರಳೀಕೃತ ಜಿಎಸ್‌ಟಿ ರಿಟರ್ನ್ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಸರಳೀಕೃತ ರಿಟರ್ನ್‌ ಅರ್ಜಿ ನಮೂನೆಯು 2019ರ ಏಪ್ರಿಲ್‌ 1ರಿಂದ ಬಳಕೆಗೆ ಲಭ್ಯವಾಗಲಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

ಬಜೆಟ್‌ ಅಂದಾಜಿನಂತೆಯೇ ಜಿಎಸ್‌ಟಿ ಸಂಗ್ರಹಿಸುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ‘ತೆರಿಗೆ ವಂಚನೆ ನಡೆಸುತ್ತಿರುವ ಸಂಸ್ಥೆಗಳ ಬಗ್ಗೆ ರೆವಿನ್ಯೂ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ’ ಎಂದಿದ್ದಾರೆ.

ರೆವಿನ್ಯೂ ಬೇಹುಗಾರಿಕಾ ನಿರ್ದೇಶನಾಲಯದ (ಡಿಆರ್‌ಐ) ಸಂಸ್ಥಾಪನಾ ದಿನದ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜಿಎಸ್‌ಟಿ ಮರು
ಪಾವತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ಗೊಳಿಸಲಾಗುವುದು. ತೆರಿಗೆ ಪಾವತಿದಾರರ ಸ್ನೇಹಿಯಾಗಿ ರೂಪಿಸಲಾಗುವುದು’ ಎಂದು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು