ಭಾನುವಾರ, ಮೇ 9, 2021
27 °C

ಶೇ 4ರಷ್ಟು ತಗ್ಗಿದ ಎಸ್‌ಐಪಿ ಮೊತ್ತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2020–21ನೆಯ ಆರ್ಥಿಕ ವರ್ಷದಲ್ಲಿ ಮ್ಯೂಚುವಲ್‌ ಫಂಡ್‌ ಕಂಪನಿಗಳು ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಸಂಗ್ರಹಿಸಿದ ಹಣದ ಪ್ರಮಾಣದಲ್ಲಿ ಶೇಕಡ 4ರಷ್ಟು ಇಳಿಕೆ ಆಗಿದೆ.

2019–20ನೆಯ ಆರ್ಥಿಕ ವರ್ಷದಲ್ಲಿ ಒಟ್ಟು ₹ 1 ಲಕ್ಷ ಕೋಟಿಯನ್ನು ಎಸ್‌ಐಪಿ ಮೂಲಕ ಸಂಗ್ರಹಿಸಲಾಗಿತ್ತು ಎಂದು ಭಾರತದ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.

ಸಣ್ಣ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಹೆಚ್ಚಾಗಿ ಎಸ್‌ಐಪಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘ಮುಂದಿನ ದಿನಗಳಲ್ಲಿ ಕೋವಿಡ್–19 ಲಸಿಕೆ ಅಭಿಯಾನ, ಆರ್ಥಿಕ ಬೆಳವಣಿಗೆ, ಆದಾಯ ಹೆಚ್ಚಳ... ಇವೆಲ್ಲ ಎಸ್‌ಐಪಿ ಹರಿವಿನ ಮೇಲೆ ಪ್ರಭಾವ ಬೀರಲಿವೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಹಿಂದಿನ ವರ್ಷದ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಜಾರಿಗೆ ಬಂತು. ಆದಾಯ ಅನಿಶ್ಚಿತವಾಯಿತು. ಆಗ ಬಹಳಷ್ಟು ಜನ ಸಣ್ಣ ಹೂಡಿಕೆದಾರರು ಎಸ್‌ಐಪಿ ಮೊತ್ತ ತಡೆಹಿಡಿಯುವ ತೀರ್ಮಾನಕ್ಕೆ ಬಂದರು’ ಎಂದು ಫೈಯರ್ಸ್‌ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಗೋಪಾಲ್ ಕವಲಿರೆಡ್ಡಿ ತಿಳಿಸಿದರು.

ಪ್ರಸ್ತುತ ಒಟ್ಟು 3.73 ಕೋಟಿ ಎಸ್‌ಐಪಿ ಖಾತೆಗಳು ಇದ್ದು, ಸಣ್ಣ ಹೂಡಿಕೆದಾರರು ಇವುಗಳ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು