ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್ ಡಿಜಿಟಲ್‌ನಲ್ಲಿ ವಿಶೇಷ ಕೊಡುಗೆಗಳು

Last Updated 29 ಅಕ್ಟೋಬರ್ 2021, 16:24 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್‌ ಡಿಜಿಟಲ್ ಮಳಿಗೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಿಶೇಷ ಕೊಡುಗೆಗಳು ಸಿಗಲಿವೆ. ಮೈಜಿಯೊ ಸ್ಟೋರ್ಸ್‌ ಮತ್ತು reliancedigital.in ವೆಬ್‌ಸೈಟ್‌ಗಳಲ್ಲಿಯೂ ಈ ಕೊಡುಗೆಗಳು ಸಿಗಲಿವೆ.

ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ವಿವಿಧ ಕೊಡುಗೆಗಳು ಮಾತ್ರವಲ್ಲದೆ, ಎಕ್ಸಿಸ್‌ ಬ್ಯಾಂಕ್, ಸಿಟಿ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳಿಗೆ ಶೇಕಡ 10ರಷ್ಟು ರಿಯಾಯಿತಿ ಕೂಡ ಇರಲಿದೆ. ಈ ಕೊಡುಗೆಗಳು ನವೆಂಬರ್ 7ರವರೆಗೆ ಚಾಲ್ತಿಯಲ್ಲಿ ಇರಲಿವೆ.

ಟಿವಿ, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ರೆಫ್ರಿಜರೇಟರ್‌, ವಾಷಿಂಗ್ ಮೆಷಿನ್ ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಮೇಲೆ ವಿಶೇಷ ಕೊಡುಗೆಗಳು ಇರಲಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT