ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಭಾರತ ನಿರ್ಮಾಣಕ್ಕೆ ನವೋದ್ಯಮ ಬೆನ್ನೆಲುಬು: ಗೋಯಲ್

Published 27 ಫೆಬ್ರುವರಿ 2024, 15:51 IST
Last Updated 27 ಫೆಬ್ರುವರಿ 2024, 15:51 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಭಾರತದ ಜಿಡಿಪಿ ಗಾತ್ರವು 2047ರ ವೇಳೆಗೆ ₹2,905 ಲಕ್ಷ ಕೋಟಿಗೆ (35 ಟ್ರಿಲಿಯನ್‌ ಡಾಲರ್‌) ತಲುಪುವ ನಿರೀಕ್ಷೆಯಿದೆ. ಈ ನವ ಭಾರತದ ನಿರ್ಮಾಣಕ್ಕೆ ನವೋದ್ಯಮಗಳು ಬೆನ್ನಲುಬಾಗಲಿವೆ’ ಎಂದು ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಲಿದೆ. ಇದಕ್ಕೆ ನವೋದ್ಯಮಗಳು ಬಹುದೊಡ್ಡ ಕೊಡುಗೆ ನೀಡಲಿವೆ ಎಂಬುದು ನನ್ನ ನಂಬಿಕೆ. ಹಾಗಾಗಿ, ಇದರಲ್ಲಿ ಪಾಲುದಾರರಾಗುವ ಅವಕಾಶವನ್ನು ಉದ್ಯಮಿಗಳು ಕಳೆದುಕೊಳ್ಳಬಾರದು’ ಎಂದು ಹೇಳಿದ್ದಾರೆ.

ನವದೆಹಲಿಯ ಭಾರತ ಮಂಟಪಂನಲ್ಲಿ ಮಾರ್ಚ್‌ 18ರಿಂದ 20ರ ವರೆಗೆ ನವೋದ್ಯಮಗಳ ಮಹಾಕುಂಭ ಆಯೋಜಿಸಲಾಗಿದೆ. 1,000ಕ್ಕೂ ಹೆಚ್ಚು ಪ್ರತಿನಿಧಿಗಳು, ಐದು ಸಾವಿರಕ್ಕೂ ಹೆಚ್ಚು ನವ ಉದ್ಯಮಿಗಳು ಸೇರಿದಂತೆ 40 ಸಾವಿರ ವ್ಯಾಪಾರ ಸಂದರ್ಶಕರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT