ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗಿದ ₹ 3 ಲಕ್ಷ ಕೋಟಿ ಸಂಪತ್ತು

ಷೇರುಪೇಟೆಯ ವಾರದ ವಹಿವಾಟು ವಿಶ್ಲೇಷಣೆ
Last Updated 8 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿದೇಶದ ಷೇರುಪೇಟೆಗಳ ವಾರದ ವಹಿವಾಟು ಚಂಚಲವಾಗಿತ್ತು.

ವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 3 ಲಕ್ಷ ಕೋಟಿ
ಗಳಷ್ಟು ಕರಗಿದೆ. ಇದರಿಂದ ಷೇರು ಪೇಟೆಯ ಬಂಡವಾಳ ಮೌಲ್ಯ ₹ 156 ಲಕ್ಷ ಕೋಟಿಗಳಿಂದ ₹ 153 ಲಕ್ಷ ಕೋಟಿ
ಗಳಿಗೆ ಇಳಿಕೆಯಾಗಿದೆ.

ರಂಜಾನ್‌ ಪ್ರಯುಕ್ತ ಬುಧವಾರ ವಹಿವಾಟು ನಡೆಯಲಿಲ್ಲ. ಹೀಗಾಗಿ ನಾಲ್ಕು ದಿನಗಳ ವಹಿವಾಟಿನಲ್ಲಿ ಎರಡು ದಿನಗಳು ಮಾತ್ರವೇ ಸೂಚ್ಯಂಕ ಏರಿಕೆ ಕಂಡಿವೆ. ವಾರದ ವಹಿವಾಟಿನ ಆರಂಭದ ದಿನವಾದ ಸೋಮವಾರ ಬಿಎಸ್‌ಇ 553 ಅಂಶ ಜಿಗಿತ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 40,267 ಅಂಶಗಳಿಗೆ ತಲುಪಿತ್ತು. ಮಂಗಳವಾರ 184 ಅಂಶ ಇಳಿಕೆಯಾಗಿ 40,083ಕ್ಕೆ ತಲುಪಿತು.

ಗುರುವಾರ ಆರ್‌ಬಿಐ ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸಿದರೂ ಸೂಚ್ಯಂಕಗಳು ಏರಿಕೆ ಕಾಣಲಿಲ್ಲ. ಮಾರಾಟದ ಒತ್ತಡದಿಂದ 554 ಅಂಶ ಕುಸಿತ ಕಂಡು, 39,529 ಅಂಶಗಳಿಗೆ ಇಳಿಕೆ ಕಂಡಿತು. ಶುಕ್ರವಾರವೂ ವಹಿವಾಟು ಇಳಿಮುಖವಾಗಿತ್ತು.

ಒಟ್ಟಾರೆ ವಾರದ ವಹಿವಾಟಿನಲ್ಲಿ ಬಿಎಸ್‌ಇ 98 ಅಂಶಗಳ ಇಳಿಕೆಯೊಂದಿಗೆ 39,615 ಅಂಶಗಳಲ್ಲಿ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 52 ಅಂಶ ಇಳಿಕೆಯಾಗಿ 11,870 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿತು.

ಇಳಿಮುಖ ವಹಿವಾಟಿಗೆ ಕಾರಣಗಳು: ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಂಘರ್ಷವು ಜಾಗತಿಕ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ದೇಶದಲ್ಲಿ ಬ್ಯಾಂಕಿಂಗೇತರ ಹಣ
ಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಎದುರಿಸುತ್ತಿರುವ ನಗದು ಕೊರತೆ ಸಮಸ್ಯೆಯು ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

2018–19ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 6.8ರಷ್ಟು ದಾಖಲಾಗಿದ್ದು, ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದರ ಜತೆಗೆ 2019–20ನೇ ಹಣಕಾಸು ವರ್ಷದ ವೃದ್ಧಿ ದರವನ್ನು ಆರ್‌ಬಿಐ ಶೇ 7.2 ರಿಂದ ಶೇ 7ಕ್ಕೆ ಇಳಿಸಿದೆ. ದೇಶಿ ಆರ್ಥಿಕತೆಯ ಅಭಿವೃದ್ಧಿಯ ವೇಗ ದುರ್ಬಲವಾಗಿದೆ ಎಂದು ಆರ್‌ಬಿಐ ತನ್ನ ಹಣಕಾಸು ನೀತಿ ಹೇಳಿಕೆಯಲ್ಲಿ ತಿಳಿಸಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಷೇರುಗಳ ಮಾರಾಟಕ್ಕೆ ಗಮನ ನೀಡಿದ್ದಾರೆ. ಇದರಿಂದಾಗಿ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ. ವಾರದ ವಹಿವಾಟಿನಲ್ಲಿ ₹ 2,823 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT