ಗುರುವಾರ , ಅಕ್ಟೋಬರ್ 6, 2022
26 °C

ಹೊರಗುತ್ತಿಗೆ ವ್ಯವಸ್ಥೆ ಮೂಲಕ ಸಾಲ ವಸೂಲು ಮಾಡದಂತೆ ಮಹೀಂದ್ರಾ ಫಿನಾನ್ಸ್‌ಗೆ ಸೂಚನೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಹೊರಗುತ್ತಿಗೆ ವ್ಯವಸ್ಥೆಗಳ ಮೂಲಕ ಮಾಡಲಾಗುತ್ತಿರುವ ಸಾಲ ವಸೂಲಾತಿ ಮತ್ತು ಸ್ವಾಧೀನ ಪಡೆಸಿಕೊಳ್ಳುವ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ‘ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್‌’ಗೆ ಆರ್‌ಬಿಐ ಗುರುವಾರ ನಿರ್ದೇಶನ ನೀಡಿದೆ. 

ಆದರೆ, ಕಂಪನಿಯು ತನ್ನ ಸ್ವಂತ ಉದ್ಯೋಗಿಗಳ ಮೂಲಕ ಸಾಲ ವಸೂಲಾತಿ ಮತ್ತು ಸ್ವಾಧೀನ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ತಿಳಿಸಲಾಗಿದೆ. 

ಜಾರ್ಖಂಡ್‌ನಲ್ಲಿ ಸಾಲ ವಸೂಲಾತಿ ಏಜೆಂಟರು ಇತ್ತೀಚೆಗೆ ಗರ್ಭಿಣಿ ಮಹಿಳೆಯೊಬ್ಬರನ್ನು ಟ್ರ್ಯಾಕ್ಟರ್‌ ಹರಿಸಿ ಕೊಂದ ಘಟನೆಯ ಹಿನ್ನೆಲೆಯಲ್ಲೇ ಈ ನಿರ್ದೇಶನ ಬಂದಿದೆ. ಹೀಗಾಗಿ ಈ ಬೆಳವಣಿಗೆಯು ಪ್ರಾಮುಖ್ಯತೆ ಪಡೆದಿದೆ. 

ಆರ್‌ಬಿಐ ಕಾಯ್ದೆಯ ಸೆಕ್ಷನ್ 45L(1)(ಬಿ) ಅಡಿಯಲ್ಲಿನ ತನ್ನ ಅಧಿಕಾರ ಬಳಸಿ ಆರ್‌ಬಿಐ ನಿರ್ದೇಶನ ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು