ಮೆಡ್‌ಲೈಫ್‌ ವಶಕ್ಕೆ ಮೆಡ್‌ಲ್ಯಾಬ್ಸ್‌

7

ಮೆಡ್‌ಲೈಫ್‌ ವಶಕ್ಕೆ ಮೆಡ್‌ಲ್ಯಾಬ್ಸ್‌

Published:
Updated:

ಬೆಂಗಳೂರು: ಆನ್‌ಲೈನ್‌ನಲ್ಲಿ ಔಷಧಗಳನ್ನು ಮಾರಾಟ ಮಾಡುವ ಮೆಡ್‌ಲೈಫ್‌ ಇಂಟರ್‌ನ್ಯಾಷನಲ್‌ ಕಂಪನಿಯು ಮುಂಬೈ ಮೂಲದ ಡಿಜಿಟಲ್‌ ಹೆಲ್ತ್‌ಕೇರ್‌ ಮತ್ತು ಮನೆ ಬಾಗಿಲಿಗೆ ಡಯಾಗ್ನಸ್ಟಿಕ್‌ ಸೇವೆಗಳನ್ನು ನೀಡುವ ಮೆಡ್‌ಲ್ಯಾಬ್ಸ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ.

‘ಈ ಸ್ವಾಧೀನದಿಂದ ಮೆಡ್‌ಲೈಫ್‌ನ ಡಯಾಗ್ನಸ್ಟಿಕ್‌ ವಹಿವಾಟು ವಿಸ್ತರಣೆಗೆ ಅನುಕೂಲವಾಗಲಿದೆ’ ಎಂದು ಸಿಇಒ ತುಷಾರ್‌ ಕುಮಾರ್ ತಿಳಿಸಿದ್ದಾರೆ.

‘ದೇಶದ ಆರೋಗ್ಯಸೇವೆ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ್ದಾಗಿದೆ’ ಎಂದು ಮೆಡ್‌ಲ್ಯಾಬ್ಸ್‌ ಸ್ಥಾಪಕ ಸಿದ್ಧಾರ್ಥ್ ಬಿದ್ವಾನ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಯೋಗಾಲಯ: ‘ಭಾರತದ ಗ್ರಾಹರಿಗೆ ಉತ್ತಮ ಸೇವೆಗಳನ್ನು ನೀಡುವ ಸಲುವಾಗಿ ಬೆಂಗಳೂರಿನಲ್ಲಿ ಕೇಂದ್ರೀಯ ಪ್ರಯೋಗಾಲಯವನ್ನು ಸ್ಥಾಪಿಸಲು ಮೆಡ್‌ಲೈಫ್‌ ಮುಂದಾಗಿದೆ. 5 ಸಾವಿರ ಚದರ ಮೀಟರ್‌ ವಿಸ್ತೀರ್ಣದಲ್ಲಿ ಪ್ರಯೋಗಾಲಯ ಇರಲಿದೆ’ ಎಂದು ತುಷಾರ್‌ ತಿಳಿಸಿದ್ದಾರೆ.

ಸ್ಟೋರ್‌ಕಿಂಗ್‌ ಸಾಲ

ಗ್ರಾಮೀಣ ಪ್ರದೇಶದ ಜನರು ಸ್ಥಳೀಯ ವರ್ತಕರಿಂದಲೇ ತಮಗೆ ಬೇಕಾದ ಟಿವಿ, ಫ್ರಿಜ್‌ ಮತ್ತಿತರ ಗೃಹೋಪಯೋಗಿ ಸರಕು, ಮೊಬೈಲ್‌ಗಳನ್ನು ಖರೀದಿಸಿ ಮನೆ ಬಾಗಿಲಿಗೆ ತರಿಸಿಕೊಳ್ಳಲು ನೆರವಾಗುತ್ತಿರುವ ಸ್ಟೋರ್‌ಕಿಂಗ್‌ ನವೋದ್ಯಮವು ವರ್ತಕರಿಗೆ ಸಾಲ ಸೌಲಭ್ಯ ವಿಸ್ತರಿಸಲು ಮುಂದಾಗಿದೆ.

ಸಾಲದ ಸರಾಸರಿ ಮೊತ್ತ ₹ 60 ಸಾವಿರದಿಂದ ₹1.5 ಲಕ್ಷದವರೆಗೆ ಇದೆ. ಇದುವರೆಗೆ ₹ 54 ಕೋಟಿ ಸಾಲ ಒದಗಿಸಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ 75 ಸಾವಿರ ವರ್ತಕರಿಗೆ ಈ ಸೌಲಭ್ಯ ತಲುಪಿಸುವ ಗುರಿ ಹಾಕಿಕೊಂಡಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪಾಲುದಾರರ ಮೂಲಕ ಈ ವರ್ಷದ ಅಂತ್ಯದ ವೇಳೆಗೆ ₹ 100 ಕೋಟಿ ಸಾಲ ಒದಗಿಸಲು ಉದ್ದೇಶಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !