ಮಂಗಳವಾರ, ಏಪ್ರಿಲ್ 20, 2021
32 °C

ಎಲ್‌ಪಿಜಿ ಬೆಲೆ ₹ 25ರಷ್ಟು ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಗುರುವಾರ ₹ 25ರಷ್ಟು ಹೆಚ್ಚಳವಾಗಿದೆ. ಈ ಹೆಚ್ಚಳವು ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯವಾಗುತ್ತದೆ. ಗುರುವಾರದ ಹೆಚ್ಚಳದಿಂದಾಗಿ ಫೆಬ್ರುವರಿಯಲ್ಲಿ ಒಟ್ಟು ಮೂರು ಬಾರಿ ಎಲ್‌ಪಿಜಿ ದರ ಹೆಚ್ಚಳ ಆದಂತಾಗಿದೆ.

14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಈಗ ದೆಹಲಿಯಲ್ಲಿ ₹ 794ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಇದರ ಬೆಲೆ ₹ 797. ಬೆಂಗಳೂರಿನಲ್ಲಿ ಬುಧವಾರ ಎಲ್‌ಪಿಜಿ ಬೆಲೆ ₹ 772 ಆಗಿತ್ತು.

ದೇಶದೆಲ್ಲೆಡೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆಯ್ದ ಕೆಲವು ಗ್ರಾಹಕರಿಗೆ ಮಾತ್ರ ಸಣ್ಣ ಮೊತ್ತ ಸಬ್ಸಿಡಿ ರೂಪದಲ್ಲಿ ಸಿಗುತ್ತಿದೆ ಎನ್ನಲಾಗಿದೆ. ಮಹಾನಗರಗಳು ಹಾಗೂ ಪ್ರಮುಖ ನಗರಗಳ ಗ್ರಾಹಕರಿಗೆ ಈ ಸಬ್ಸಿಡಿ ಸಿಗುತ್ತಿಲ್ಲ.

‘ದೂರದ ಪ್ರದೇಶಗಳ ಜನರಿಗೆ ಸಣ್ಣ ಮೊತ್ತವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಎಲ್‌ಪಿಜಿ ಸಿಲಿಂಡರ್‌ ಸಾಗಣೆಯ ಹೆಚ್ಚುವರಿ ವೆಚ್ಚವು ಅವರಿಗೆ ಹೊರೆಯಾಗದಿರಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ’ ಎಂದು ತೈಲೋತ್ಪನ್ನಗಳ ಕಂಪನಿಯೊಂದರ ಅಧಿಕಾರಿಯೊಬ್ಬರು ತಿಳಿಸಿದರು.

ಈ ತಿಂಗಳ 4ರಂದು ಎಲ್‌ಪಿಜಿ ಬೆಲೆಯನ್ನು ₹ 25ರಷ್ಟು ಹೆಚ್ಚಿಸಲಾಗಿತ್ತು. ನಂತರ, 15ರಂದು ಬೆಲೆಯಲ್ಲಿ ₹ 50ರಷ್ಟು ಹೆಚ್ಚಳ ಮಾಡಲಾಯಿತು. ಈಗ ₹ 25ರಷ್ಟು ಜಾಸ್ತಿಯಾಗಿದೆ. ಪರಿಣಾಮವಾಗಿ ಒಂದೇ ತಿಂಗಳಿನಲ್ಲಿ ಎಲ್‌ಪಿಜಿ ಬೆಲೆ ಒಟ್ಟು ₹ 100ರಷ್ಟು ಏರಿಕೆ ಕಂಡಂತೆ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು