ಸೋಮವಾರ, ಆಗಸ್ಟ್ 19, 2019
21 °C

ಕಡಿಮೆ ಬಡ್ಡಿಗೆ ಗೃಹ ಸಾಲ:ಸಿಂಡಿಕೇಟ್‌ ಬ್ಯಾಂಕ್‌

Published:
Updated:

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ತನ್ನ ಎಲ್ಲಾ ಸಾಲಗಳ ಮೇಲಿನ ಬಡ್ಡಿದರವನ್ನು ಸೋಮವಾರದಿಂದ ಜಾರಿಗೆ ಬರುವಂತೆ ಶೇ 0.25 ರಷ್ಟು ಕಡಿಮೆ ಮಾಡಿದೆ.

ಗೃಹ ಸಾಲ ಅಗ್ಗವಾಗಿದ್ದು ಶೇ 8.30 ರಷ್ಟು ಬಡ್ಡಿದರದಲ್ಲಿ ಸಿಗಲಿದೆ. ಬ್ಯಾಂಕ್‌ ನಿಂದ ಮಂಜೂರಾದ ಗೃಹ ಸಾಲವು ಪ್ರಧಾನ ಮಂತ್ರಿ ಆವಾಸ್ ಯೊಜನೆಗೆ
ಒಳಪಟ್ಟಿದ್ದು, ಅರ್ಹ ಗ್ರಾಹಕರಿಗೆ ₹ 2.67 ಲಕ್ಷದವರೆಗೆ ಬಡ್ಡಿ ಸಬ್ಸಿಡಿ ದೊರೆಯಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಈ ವರ್ಷದಲ್ಲಿ ಇದುವರೆಗೆ ಶೇ 0.50 ರಷ್ಟು ಬಡ್ಡಿದರ ತಗ್ಗಿಸಲಾಗಿದೆ. ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ರೆಪೊ ದರಕ್ಕೆ ಸಂಪರ್ಕಿಸಲಾಗಿದೆ. ₹ 25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಯು ರೆಪೊ ದರಕ್ಕೆ ಒಳಪಡಲಿದೆ ಎಂದು ಹೇಳಿದೆ.

Post Comments (+)