ಗುರುವಾರ , ಜುಲೈ 29, 2021
21 °C

ಶೇ 25ರವರೆಗೆ ರಿಯಾಯಿತಿ ಕೊಡುಗೆ: ತನಿಷ್ಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ ಆಗಿರುವ ತನಿಷ್ಕ್, ತನ್ನ ಗ್ರಾಹಕರಿಗೆ ಚಿನ್ನಾಭರಣಗಳ ಮೇಕಿಂಗ್‌ ಚಾರ್ಜ್‌ ಮೇಲೆ ಹಾಗೂ ವಜ್ರಾಭರಣಗಳ ಮೌಲ್ಯದ ಮೇಲೆ ಶೇ 25ರವರೆಗೆ ರಿಯಾಯಿತಿ ಕೊಡುಗೆ ಘೊಷಿಸಿದೆ. ಈ ಕೊಡುಗೆಯು ಇದೇ 22ರವರೆಗೂ ಇರಲಿದೆ.

‘ಲಾಕ್‌ಡೌನ್ ಬಳಿಕ ಇದೀಗ ಹೊಸದಾಗಿ ಸಹಜ ಜೀವನ ಆರಂಭಿಸುತ್ತಿದ್ದು, ನವೋಲ್ಲಾಸದ ಆರಂಭಕ್ಕೆ ಸಜ್ಜಾಗಿದ್ದೇವೆ. ಈ ಸಂದರ್ಭದಲ್ಲಿ ತನಿಷ್ಕ್‌ ಎಲ್ಲರಿಗೂ ಶುಭ ಆರಂಭದ ಯಶಸ್ಸನ್ನು ಕೋರಲಿದೆ. ಹೊಸ ಸಾಧ್ಯತೆಗಳು ಭರವಸೆ ಮೂಡಿಸಲಿ. ನಾವು ಹೊಸ ಆರಂಭಕ್ಕಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದ್ದೇವೆ’ ಎಂದು ಕಂಪನಿಯ ಜುವೆಲರಿ ವಿಭಾಗದ ಪ್ರಧಾನ ವ್ಯವಸ್ಥಾಪಕ ರಂಜನಿ ಕೃಷ್ಣಮೂರ್ತಿ ಹೇಳಿದ್ದಾರೆ.

ಎರಡು ತಿಂಗಳಿನಲ್ಲಿ ತನಿಷ್ಕ್‌ ತನ್ನ ವಿಸ್ತೃತ ಶ್ರೇಣಿಗೆ 170ಕ್ಕೂ ಅಧಿಕ ಉತ್ಪನ್ನಗಳನ್ನು ಸೇರಿಸಿದ್ದು, ಆಕರ್ಷಕವಾದ ಕಿವಿಯೋಲೆ, ಉಂಗುರ ಮತ್ತು ಪೆಂಡೆಂಟ್‌ಗಳು ಇದರಲ್ಲಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು