ಬೆಂಗಳೂರು: ಟಾಟಾ ಸಮೂಹದ ಆಭರಣ ರಿಟೇಲ್ ಬ್ರ್ಯಾಂಡ್ ‘ತನಿಷ್ಕ್’, ‘ಅಲೇಖ್ಯಾ’ ಹೆಸರಿನ ಆಭರಣಗಳ ಸಂಗ್ರಹವನ್ನು ಅನಾವರಣ ಮಾಡಿದೆ.

ಈ ಸಂಗ್ರಹವು ಗಮನ ಸೆಳೆಯುವ ಮಿನಿಯೇಚರ್ ಮತ್ತು ಪಿಚ್ವಾಯಿ ವರ್ಣಚಿತ್ರಗಳಿಂದ ಸ್ಫೂರ್ತಿ ಪಡೆದ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತವಾದ ಭಾರತೀಯ ಕಲಾ ಪ್ರಕಾರಗಳ ಸೌಂದರ್ಯವನ್ನು ನೆನಪಿಸುತ್ತದೆ ಎಂದು ಪ್ರಕಟಣೆ ಹೇಳಿದೆ.

ಅಲೇಖ್ಯಾ ಸಂಗ್ರಹವು ಸಂಕೀರ್ಣ ಕರಕುಶಲತೆ ಮತ್ತು ಎದ್ದುಕಾಣುವ ವರ್ಣಗಳನ್ನು ಒಳಗೊಂಡಿದ್ದು, ವಿಶಿಷ್ಟವಾಗಿದೆ. ಇದು ಆಧುನಿಕ ಸಂವೇದನೆಗಳೊಂದಿಗೆ ಪರಂಪರೆ ಮತ್ತು ಸಾಂಪ್ರದಾಯಿಕ ವಿನ್ಯಾಸಗಳ ಸುಲಲಿತ ಮಿಶ್ರಣ ಎಂದು ಕೂಡ ಪ್ರಕಟಣೆಯು ತಿಳಿಸಿದೆ.

ಹಬ್ಬದ ಸಂಗ್ರಹ ಬಿಡುಗಡೆಯ ಕುರಿತು ಮಾತನಾಡಿರುವ ಟೈಟನ್ ಕಂಪನಿಯ ವಿನ್ಯಾಸ ವಿಭಾಗದ ಮುಖ್ಯಸ್ಥ ಅಭಿಷೇಕ್ ರಸ್ತೋಗಿ ‘ನಮ್ಮ ಗ್ರಾಹಕರಿಗೆ ಪರಿಪೂರ್ಣವಾಗಿ ವಿನ್ಯಾಸಗೊಳಿಸಿದ ಉತ್ಪನ್ನಗಳನ್ನು ನೀಡಲು ನಮ್ಮ ಪ್ರಯತ್ನ ಇದು. ಹೊಸ ಸಂಗ್ರಹವು ಅದ್ಭುತವಾದ ನೆಕ್‍ವೇರ್, ಕಿವಿಯೋಲೆಗಳು ಮತ್ತು ಕರಕುಶಲ ಆಭರಣದ ತುಣುಕುಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.

ಅಲೇಖ್ಯಾ ಸಂಗ್ರಹದ ಉತ್ಪನ್ನಗಳ ಬೆಲೆಯು ₹ 70,000ದಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗೆ www.Tanishq.co.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.