ಭಾನುವಾರ, ಮೇ 16, 2021
22 °C

ತನಿಷ್ಕ್‌: ಹೊಸ ಆಭರಣ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಾಟಾ ಸಮೂಹಕ್ಕೆ ಸೇರಿದ ‘ತನಿಷ್ಕ್‌’ ಆಭರಣ ಕಂಪನಿಯು ಬೇಸಿಗೆಯ ವಿವಾಹ ಕಾರ್ಯಕ್ರಮಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ‘ರಿವಾಹ್’ ಬ್ರ್ಯಾಂಡ್‌ನ ಚಿನ್ನಾಭರಣಗಳನ್ನು ಬಿಡುಗಡೆ ಮಾಡಿದೆ.

ರಿವಾಹ್‌ ಬ್ರ್ಯಾಂಡ್‌ ಅಡಿಯಲ್ಲಿನ ಆಭರಣಗಳು ಪ್ರಾದೇಶಿಕ ವಿನ್ಯಾಸ ಹಾಗೂ ಆಧುನಿಕ ರೂಪ ಹೊಂದಿವೆ ಎಂದು ಕಂಪನಿ ಹೇಳಿಕೊಂಡಿದೆ. ಅತ್ಯುತ್ಕೃಷ್ಟವಾದ ಕುಸುರಿಯು ವಧುವಿನ ಉಡುಪಿಗೆ ಹೆಚ್ಚಿನ ಸೌಂದರ್ಯವನ್ನು ತಂದುಕೊಡುತ್ತದೆ ಎಂದು ತನಿಷ್ಕ್ ಹೇಳಿದೆ.

‘ಮದುವೆ ಎಂಬುದು ನಮ್ಮ ಜೀವನದ ಮರೆಯಲಾಗದ ಸಂದರ್ಭಗಳಲ್ಲಿ ಒಂದು. ಮದುವೆಗಾಗಿ ಖರೀದಿಸುವ ಆಭರಣಗಳಿಗೆ ನಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನ ಇರುತ್ತದೆ. ಮದುವೆ ಎಂಬುದು ನಮ್ಮ ಸಂಪ್ರದಾಯಗಳ ಶ್ರೀಮಂತಿಕೆಯ ದ್ಯೋತಕವೂ ಹೌದು. ರಿವಾಹ್ ಬ್ರ್ಯಾಂಡ್‌ನ ಆಭರಣಗಳು ಈ ಶ್ರೀಮಂತಿಕೆಯನ್ನು ಸಂಭ್ರಮದಿಂದ ಕಾಣುತ್ತವೆ’ ಎಂದು ತನಿಷ್ಕ್‌ ಕಂಪನಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕಿ ರಂಜನಿ ಕೃಷ್ಣಸ್ವಾಮಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು