ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಯಾಗೊ ಇವಿ ಅನಾವರಣ, ಬೆಲೆ ₹ 8.49 ಲಕ್ಷದಿಂದ ಆರಂಭ

Last Updated 28 ಸೆಪ್ಟೆಂಬರ್ 2022, 11:25 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರಸಕ್ತ ದಶಕದ ಅಂತ್ಯದ ಹೊತ್ತಿಗೆ ತಾನು ಮಾರಾಟ ಮಾಡುವ ವಾಹನಗಳ ಪೈಕಿ ಶೇಕಡ 30ರಷ್ಟು ವಾಹನಗಳು ವಿದ್ಯುತ್ ಚಾಲಿತ (ಇ.ವಿ.) ಆಗಿರಲಿವೆ ಎಂದು ಟಾಟಾ ಮೋಟರ್ಸ್ ಕಂಪನಿ ಅಂದಾಜು ಮಾಡಿದೆ.

ಹೊಸ ಇ.ವಿ. ಮಾದರಿಗಳನ್ನು ಮಾರುಕಟ್ಟೆಗೆ ತರುವುದರ ಜೊತೆಯಲ್ಲಿಯೇ ಕಂಪನಿಯು ಸಾಂಪ್ರದಾಯಿಕ ಇಂಧನ ಬಳಸುವ ವಾಹನಗಳ ಮೇಲೆಯೂ ಹೂಡಿಕೆ ಮುಂದುವರಿಸಲಿದೆ. ಇಂತಹ ವಾಹನಗಳಿಗೆ 2030ರ ನಂತರವೂ ಒಳ್ಳೆಯ ಬೇಡಿಕೆ ಇರಲಿದೆ ಎಂದು ಅದು ಅಂದಾಜಿಸಿದೆ.

ಟಾಟಾ ಮೋಟರ್ಸ್‌ ಕಂಪನಿಯು ಬುಧವಾರ ‘ಟಿಯಾಗೊ ಇವಿ’ಯನ್ನು ಅನಾವರಣ ಮಾಡಿದೆ. ಮೊದಲ ಹತ್ತು ಸಾವಿರ ಗ್ರಾಹಕರಿಗೆ ಇದರ ಪರಿಚಯಾತ್ಮಕ ಬೆಲೆ ₹ 8.49 ಲಕ್ಷದಿಂದ ₹ 11.79 ಲಕ್ಷದವರೆಗೆ (ಎಕ್ಸ್‌ ಷೋರೂಂ) ಇರಲಿದೆ. ನೆಕ್ಸಾನ್‌ ಇವಿ ಅಥವಾ ಟಿಗೋರ್ ಇವಿ ಕಾರನ್ನು ಈಗಾಗಲೇ ಹೊಂದಿರುವವರಿಗೆ 2,000 ‘ಟಿಯಾಗೊ ಇವಿ’ಗಳನ್ನು ಕಾಯ್ದಿರಿಸಲಾಗುತ್ತದೆ.

ಟಾಟಾ ಮೋಟರ್ಸ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಇ.ವಿ.ಗಳ ಪೈಕಿ ಟಿಯಾಗೊ ಇವಿ ಅತ್ಯಂತ ಕಡಿಮೆ ಬೆಲೆಯದ್ದು. 25 ಕಿಲೊವಾಟ್‌ ಸಾಮರ್ಥ್ಯದ ಬ್ಯಾಟರಿ ಇರುವ ಟಿಯಾಗೊ ವಾಹನವು ಒಮ್ಮೆ ಪೂರ್ತಿಯಾಗಿ ಚಾರ್ಜ್‌ ಆದರೆ 315 ಕಿ.ಮೀ. ಸಾಗುತ್ತದೆ. 19.2 ಕಿಲೊವಾಟ್‌ ಸಾಮರ್ಥ್ಯದ ಬ್ಯಾಟರಿ ಇರುವ ಟಿಯಾಗೊ 250 ಕಿ.ಮೀ. ಸಾಗುತ್ತದೆ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ನಿರ್ದೇಶಕ ಶೈಲೇಶ್ ಚಂದ್ರ ತಿಳಿಸಿದ್ದಾರೆ.

ಹೊಸ ವಾಹನದ ಬುಕಿಂಗ್‌ ಅಕ್ಟೋಬರ್ 10ರಿಂದ ಶುರುವಾಗಲಿದೆ. ಮುಂದಿನ ವರ್ಷದ ಜನವರಿಯಿಂದ ಕಾರನ್ನು ಗ್ರಾಹಕರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT