ಬೆಂಗಳೂರು: ದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ, ಗೌರವ ಸಿಗುವುದಿಲ್ಲ ಎಂದು ಹಲವರು ಆಗಾಗ ಆರೋಪಿಸುವುದುಂಟು. ಈ ಮಾತಿಗೆ ಇದೀಗ ತಾಜಾ ಉದಾಹರಣೆಯೊಂದು ಸಿಕ್ಕಿದೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ 69th National School Wrestling Championship ಕ್ರೀಡಾಕೂಟದಲ್ಲಿ ಭಾಗವಹಿಸಲು ಒಡಿಶಾ ರಾಜ್ಯದ ಪ್ರತಿನಿಧಿಗಳಾಗಿ ತೆರಳುತ್ತಿದ್ದ 18 ಬಾಲಕ–ಬಾಲಕಿಯರು ಪ್ರಯಾಣಕ್ಕೆ ಸೂಕ್ತ ಸೌಲಭ್ಯ ಸಿಗದೇ ಮೈ ಕೊರೆಯುವ ಚಳಿಯಲ್ಲೇ ರೈಲಿನ ಶೌಚಾಲಯದ ಬಳಿ ಕುಳಿತು ಪ್ರಯಾಣಿಸಿದ್ದಾರೆ.

ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಕುಸ್ತಿಪಟುಗಳು ಪ್ರಯಾಣಿಸುತ್ತಿರುವ ವಿಡಿಯೊಗಳು ಹರಿದಾಡಿದ್ದು, ಕ್ರೀಡಾ ಪ್ರೇಮಿಗಳು ಒಡಿಶಾ ಸರ್ಕಾರವನ್ನು ಹಾಗೂ ತಂಡದ ಮೇಲ್ವಿಚಾರಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಸಂಬಂಧಿಸಿದವರು ಇದಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ರಿಪಬ್ಲಿಕ್ ವೆಬ್ಸೈಟ್ ವರದಿ ಮಾಡಿದೆ.

ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ತಂಡದಲ್ಲಿ 10 ಬಾಲಕರು ಹಾಗೂ 8 ಬಾಲಕಿಯರು ಇದ್ದರು. ಇವರು ಕುಸ್ತಿಯಲ್ಲಿ ಒಡಿಶಾವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ತೆರಳುತ್ತಿದ್ದರು ಎಂದು ವರದಿಯಾಗಿದೆ.

ರೈಲು ಪ್ರಯಾಣದ ವೇಳೆ ಈ ಸ್ಪರ್ಧಾಳುಗಳ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ. ಟಿಟಿಇ, ಇವರಿಗೆ ಆಸನ ನೀಡಿರಲಿಲ್ಲ. ಇದರಿಂದ ತೊಂದರೆ ಅನುಭವಿಸಿ ಒಡಿಶಾ ಕ್ರೀಡಾ ಇಲಾಖೆಯ ಅವ್ಯವಸ್ಥೆಯನ್ನು ದೇಶಕ್ಕೆ ತೆರೆದಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೂ ದುರಂತ ಎಂದರೆ ಈ ಬಾಲಕ–ಬಾಲಕಿಯರು ವಾಪಸ್ ಬರುವಾಗಲೂ ಇದೇ ಪರಿಸ್ಥಿತಿ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.
.ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ.ಅಶ್ಲೀಲ ವಿಡಿಯೊ ಲಿಂಕ್ ಹರಿಬಿಟ್ಟ ಪ್ರಕರಣ: ಇನ್ಸ್ಟಾಗ್ರಾಂ ಖಾತೆಗಳ ವಿರುದ್ಧ FIR.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.