ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಅಶ್ಲೀಲ ವಿಡಿಯೊಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ 28 ಇನ್ಸ್ಟಾಗ್ರಾಂ ಖಾತೆಗಳ ವಿರುದ್ಧ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಶೇಷಾದ್ರಿಪುರ ನಿವಾಸಿ ಹರ್ಷ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ತಿಂಗಳಿನಿಂದ ಹರ್ಷ ಅವರಿಗೆ ಅಪರಿಚಿತ ವ್ಯಕ್ತಿಗಳು, ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ಗಳಲ್ಲಿ ಹುಡುಗ, ಹುಡುಗಿಯರ ಫೋಟೊಗಳನ್ನು ಹಾಕಿ ಅಶ್ಲೀಲ ಕಂಟೆಂಟ್ ಹಾಕುತ್ತಿದ್ದರು. ‘ಲಿಂಕ್ಡ್ ಇನ್, ಬಯೋ, ಡಿಎಂ ಫಾರ್ ವಿಡಿಯೊ ಲಿಂಕ್ ಬೇಕಿದ್ದರೆ ಲಿಂಕ್’ ಎಂಬುದಾಗಿ ಕಮೆಂಟ್ ಮಾಡಿ ಎಂದು ಪೋಸ್ಟ್ ಹಾಕಿ, ಅಶ್ಲೀಲ ವಿಡಿಯೊ ಶೇರ್ ಮಾಡುವುದು ಹಾಗೂ ಜನರನ್ನು ಅಶ್ಲೀಲ ವೆಬ್ಸೈಟ್ ಕಡೆಗೆ ಆಕರ್ಷಿಸುವಂತಹ ಪೋಸ್ಟ್ಗಳನ್ನು ಹಾಕುವುದು ಕಂಡು ಬಂದಿದೆ. ಈ ರೀತಿ ಹಂಚಿಕೆ ಮಾಡುತ್ತಿದ್ದ ಇನ್ಸ್ಟ್ರಾಗ್ರಾಂ ಖಾತೆಗಳನ್ನು ನಿರ್ವಹಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ಸ್ಟ್ರಾಗ್ರಾಂ ಖಾತೆಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಕಾನೂನು ಸಲಹೆ ಪಡೆದು ಖಾತೆಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಅಶ್ಲೀಲ ವಿಡಿಯೊ ತುಣುಕುಗಳು, ಸ್ಕ್ರೀನ್ ಶಾಟ್ಗಳನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 19 ನಿಮಿಷ, 40, ನಿಮಿಷ, 55 ನಿಮಿಷ ವಿಡಿಯೊ ಎಂದು ಉತ್ತೇಜಿಸುತ್ತಿದ್ದಾರೆ. ವಿಡಿಯೊಗಳು ಬೇಕಿದ್ದರೆ, ಕಮೆಂಟ್, ಡೈರೆಕ್ಟ್ ಮೆಸೇಜ್ ಮಾಡಿ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಅಪ್ಲೋಡ್ ಆಗಿರುವ ಲಿಂಕ್ ಕ್ಲಿಕ್ ಮಾಡಿದರೆ ಅಶ್ಲೀಲ ವೆಬ್ಸೈಟ್ಗಳು ತೆರೆದುಕೊಳ್ಳುತ್ತಿವೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.