ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌತ್‌ ಇಂಡಿಯನ್‌ ಬ್ಯಾಂಕ್‌ ಜೊತೆ ಟಾಟಾ ಮೋಟರ್ಸ್‌ ಒಪ್ಪಂದ

Published 29 ಏಪ್ರಿಲ್ 2024, 16:03 IST
Last Updated 29 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಮೋಟರ್ಸ್‌, ತನ್ನ ವಾಣಿಜ್ಯ ವಾಹನ ಗ್ರಾಹಕರಿಗೆ ಮತ್ತು ಡೀಲರ್‌ಶಿಪ್‌ಗಳಿಗೆ (ವಿತರಕರಿಗೆ) ಹಣಕಾಸು ನೆರವು ಸೌಲಭ್ಯ ಒದಗಿಸಲು ಸೌತ್‌ ಇಂಡಿಯನ್‌ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ಕಂಪನಿಯು 1 ಟನ್‌ಗಿಂತಲೂ ಕಡಿಮೆ ಸಾಮರ್ಥ್ಯದ ಸರಕು ಸಾಗಣೆ ವಾಹನಗಳಿಂದ 55 ಟನ್‌ ಸಾಮರ್ಥ್ಯದ ಸರಕು ಸಾಗಣೆ ವಾಹನಗಳು ಹಾಗೂ 10 ಆಸನದ ಪ್ರಯಾಣಿಕ ಸಾರಿಗೆ ವಾಹನಗಳಿಂದ 51 ಆಸನದ ಸಾರಿಗೆ ವಾಹನಗಳನ್ನು ಮಾರಾಟ ಮಾಡುತ್ತದೆ. ಈ ಒಪ್ಪಂದದಿಂದ ಈ ಎಲ್ಲ ವಾಹನಗಳಿಗೆ ಹಣಕಾಸಿನ ನೆರವು ಸೌಲಭ್ಯ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

ವಾಹನ ಮಾಲೀಕರನ್ನು ಸಬಲೀಕರಣಗೊಳಿಸುವುದು ಮತ್ತು ವಿತರಕರು ತಮ್ಮ ವ್ಯಾಪಾರ ಗುರಿಗಳನ್ನು ಸಾಧಿಸುವುದೇ ನಮ್ಮ ಒಪ್ಪಂದದ ಗುರಿಯಾಗಿದೆ ಎಂದು ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಉಪಾಧ್ಯಕ್ಷ ರಾಜೇಶ್ ಕೌಲ್ ಹೇಳಿದ್ದಾರೆ.

ಟಾಟಾ ಮೋಟರ್ಸ್‌ನೊಂದಿಗಿನ ನಮ್ಮ ಸಹಯೋಗವು ವಾಣಿಜ್ಯ ವಾಹನ ವಿತರಕರು ಮತ್ತು ಗ್ರಾಹಕರಿಗೆ ಹಣಕಾಸು ಪರಿಹಾರಗಳನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದು ಸೌತ್ ಇಂಡಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಿ.ಆರ್. ಶೇಷಾದ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT