ನವದೆಹಲಿ (ಪಿಟಿಐ): ಬ್ಲೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯಿಂದ ಒಟ್ಟು 10 ಸಾವಿರ ಎಕ್ಸ್‌ಪ್ರೆಸ್–ಟಿ ವಿದ್ಯುತ್ ಚಾಲಿತ ವಾಹನಗಳಿಗೆ (ಇ.ವಿ.) ಬೇಡಿಕೆ ಬಂದಿದೆ ಎಂದು ಟಾಟಾ ಮೋಟರ್ಸ್ ಸೋಮವಾರ ಹೇಳಿದೆ.
ದೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇ.ವಿ. ವಾಹನಗಳಿಗೆ ಒಂದೇ ಕಡೆಯಿಂದ ಬೇಡಿಕೆ ಬಂದಿರುವುದು ಇದೇ ಮೊದಲು ಎಂದು ಕೂಡ ಟಾಟಾ ಮೋಟರ್ಸ್ ಹೇಳಿದೆ. ಬ್ಲೂಸ್ಮಾರ್ಟ್ ಕಂಪನಿಯು ಅಕ್ಟೋಬರ್ ತಿಂಗಳಿನಲ್ಲಿ 3,500 ಎಕ್ಸ್‌ಪ್ರೆಸ್–ಟಿ ಇ.ವಿ.ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.