ನವದೆಹಲಿ: ‘2029–30ರ ಮೊದಲು ಐದು ಹೊಸ ವಿದ್ಯುತ್ ಚಾಲಿತ ವಾಹನಗಳನ್ನು (ಇ.ವಿ) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (ಟಿಎಂಪಿವಿ) ಮಂಗಳವಾರ ತಿಳಿಸಿದೆ.

2029–30ರೊಳಗೆ ₹16 ಸಾವಿರ ಕೋಟಿಯಿಂದ ₹18 ಸಾವಿರ ಕೋಟಿಯಷ್ಟು ಮೊತ್ತವನ್ನು ವಿದ್ಯುತ್ ಚಾಲಿತ ವಾಹನಗಳ ವ್ಯವಹಾರದಲ್ಲಿ ಹೂಡಿಕೆ ಮಾಡಲಾಗುವುದು. ಈ ಹೂಡಿಕೆಯು ದೇಶದಲ್ಲಿ ಜಾರ್ಜಿಂಗ್ ಕೇಂದ್ರಗಳನ್ನು 10 ಲಕ್ಷಕ್ಕೆ ಹೆಚ್ಚಿಸುವುದಕ್ಕೂ ಬಳಕೆಯಾಗಲಿದೆ ಎಂದು ತಿಳಿಸಿದೆ.

ಮುಂದಿನ ವರ್ಷದಲ್ಲಿ ಕಂಪನಿಯು ಸಿಯಾರಾ.ಇವಿ ಮತ್ತು ಹೊಸ ಪಂಚ್.ಇವಿ ಮತ್ತು ವರ್ಷದ ಅಂತ್ಯದ ವೇಳೆಗೆ ಬಹುನಿರೀಕ್ಷಿತ ಅವಿನ್ಯಾ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಇಲ್ಲಿಯವರೆಗೆ ಟಾಟಾ ಮೋಟರ್ಸ್ 2.5 ಲಕ್ಷ ವಿದ್ಯುತ್ ಚಾಲಿತ ವಾಹನಗಳನ್ನು ಮಾರಾಟ ಮಾಡಿದೆ. ದೇಶದಲ್ಲಿ ಮಾರಾಟವಾಗುವ ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳ ಪೈಕಿ ಶೇ 66ರಷ್ಟು ಪಾಲನ್ನು ಟಿಎಂಪಿವಿ ಹೊಂದಿದೆ.

‘ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಎಲ್ಲ ವಿಭಾಗಗಳಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಲಭ್ಯವಾಗುವಂತೆ ಮಾಡಲಾಗುವುದು’ ಎಂದು ಟಿಎಂಪಿವಿ ಎಂ.ಡಿ ಮತ್ತು ಸಿಇಒ ಶೈಲೇಶ್ ಚಂದ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.