ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್‌: ಅತ್ಯಂತ ಮೌಲ್ಯಯುತ ಕಂಪನಿ

Last Updated 18 ಮಾರ್ಚ್ 2020, 18:18 IST
ಅಕ್ಷರ ಗಾತ್ರ

ನವದೆಹಲಿ: ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಟಿಸಿಎಸ್‌ ಕಂಪನಿಯು ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನಕ್ಕೇರಿದೆ.

ಬುಧವಾರದ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌ಗೆ) ಅನ್ನು ಹಿಂದಿಕ್ಕಿ ಟಿಸಿಎಸ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹ 6,19,499.95 ಕೋಟಿ ಇದೆ. ರಿಲಯನ್ಸ್‌ ಮಾರುಕಟ್ಟೆ ಮೌಲ್ಯ ₹ 6,14,179.93 ಕೋಟಿ ಇದೆ.

ಆರ್‌ಐಎಲ್‌ಗೆ ನಷ್ಟ: ಷೇರುಪೇಟೆಯಲ್ಲಿನ ಮಾರಾಟದ ಒತ್ತಡದಿಂದಾಗಿ ಆರ್‌ಐಎಲ್‌ ಸತತ ಮೂರನೇ ದಿನವೂ ನಷ್ಟ ಅನುಭವಿಸಿದೆ. ಕಂಪನಿ ಷೇರು ಬೆಲೆ ಶೇ 12.47ರಷ್ಟು ಕುಸಿತ ಕಂಡಿದ್ದು, ಮಾರುಕಟ್ಟೆ ಮೌಲ್ಯದಲ್ಲಿ ₹ 87,506 ಕೋಟಿ ನಷ್ಟವಾಗಿದೆ.

ಬ್ಯಾಂಕ್‌ ಷೇರುಗಳ ಇಳಿಕೆ

ಇಂಡಸ್‌ಇಂಡ್‌ ಬ್ಯಾಂಕ್‌- ಶೇ 23.90,ಕೋಟಕ್‌ ಮಹೀಂದ್ರಾ ಬ್ಯಾಂಕ್‌- ಶೇ 11.23,ಎಚ್‌ಡಿಎಫ್‌ಸಿ ಬ್ಯಾಂಕ್‌- ಶೇ9.92,ಫೆಡರಲ್ ಬ್ಯಾಂಕ್‌- ಶೇ 6.79.

ಚಿನ್ನದ ದರ ಏರಿಕೆ

ಮುಂಬೈ: ದೇಶದಾದ್ಯಂತ ಚಿನ್ನದ ಧಾರಣೆ ಬುಧವಾರ 10 ಗ್ರಾಂಗೆ ಗರಿಷ್ಠ ₹649ರಂತೆ ಏರಿಕೆ ಕಂಡಿದೆ.

ಮುಂಬೈನಲ್ಲಿ 10 ಗ್ರಾಂಗೆ ₹649 ಹೆಚ್ಚಾಗಿ ₹40,375ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ₹ 311 ಹೆಚ್ಚಾಗಿ ₹40,241ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ₹ 600ರಂತೆ ಹೆಚ್ಚಾಗಿ ₹40,980ಕ್ಕೆ ಏರಿಕೆಯಾಗಿದೆ.

ತೈಲ ದರ ಇಳಿಕೆ

ಲಂಡನ್‌: ಬೇಡಿಕೆ ಕುಸಿಯುತ್ತಿರುವುದರಿಂದ ಕಚ್ಚಾ ತೈಲ ದರದಲ್ಲಿಯೂ ಇಳಿಕೆ ಆಗುತ್ತಿದೆ. ಬುಧವಾರ ಡಬ್ಲ್ಯುಪಿಐ ತೈಲ ದರ
ಶೇ 12ರಷ್ಟು ಇಳಿಕೆಯಾಗಿ ಬ್ಯಾರಲ್‌ಗೆ 17 ವರ್ಷಗಳ ಕನಿಷ್ಠ ಮಟ್ಟವಾದ 25 ಡಾಲರ್‌ಗೆ ಇಳಿಕೆಯಾಗಿದೆ. ಬ್ರೆಂಟ್‌ ತೈಲ ದರ ಶೇ 6ರಷ್ಟು ಇಳಿದು ಬ್ಯಾರಲ್‌ಗೆ 27.73 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT