ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 12 ಲಕ್ಷ ಕೋಟಿ ದಾಟಿದ ಟಿಸಿಎಸ್‌ ಮಾರುಕಟ್ಟೆ ಮೌಲ್ಯ

Last Updated 14 ಜನವರಿ 2021, 19:59 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ನ (ಟಿಸಿಎಸ್‌) ಮಾರುಕಟ್ಟೆ ಮೌಲ್ಯವು ಗುರುವಾರದ ವಹಿವಾಟಿನಲ್ಲಿ ₹ 12 ಲಕ್ಷ ಕೋಟಿ ದಾಟಿದೆ.

ಬಿಎಸ್‌ಇನಲ್ಲಿ ಪ್ರತಿ ಷೇರಿನ ಬೆಲೆ ಶೇ 2.89ರಷ್ಟು ಹೆಚ್ಚಾಗಿ ₹ 3,250ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಶೇ 3.42ರವರೆಗೂ ಏರಿಕೆ ಕಂಡು ₹ 3,267ಕ್ಕೆ ತಲುಪಿತ್ತು.

₹ 12 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಎರಡನೇ ಕಂಪನಿ ಇದಾಗಿದೆ. ಮೊದಲ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ರಿಲಯನ್ಸ್‌ ಮೊದಲ ಸ್ಥಾನದಲ್ಲಿದ್ದು, ಟಿಸಿಎಸ್ ಎರಡನೇ ಸ್ಥಾನದಲ್ಲಿದೆ. ಜನವರಿಯಿಂದ ಇಲ್ಲಿಯವರೆಗೆ ಟಿಸಿಎಸ್‌ ಷೇರು ಶೇ 13ಕ್ಕೂ ಹೆಚ್ಚು ಗಳಿಕೆ ಕಂಡಿದೆ.

ಮುಂಬೈ ಷೇರುಪೇಟೆಯು ಗುರುವಾರದ ವಹಿವಾಟಿನಲ್ಲಿ 92 ಅಂಶ ಹೆಚ್ಚಾಗಿ ಗರಿಷ್ಠ ಮಟ್ಟವಾದ 49,584 ಅಂಶಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT