ಶನಿವಾರ, ಜುಲೈ 24, 2021
22 °C

ಟಿಸಿಎಸ್‌ ಲಾಭ ಶೇ 28.5ರಷ್ಟು ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಹಿತಿ ತಂತ್ರಜ್ಞಾನ ವಲಯದ ಪ್ರಮುಖ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ಲಾಭದ ಪ್ರಮಾಣವು ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 28.5ರಷ್ಟು ಹೆಚ್ಚಳವಾಗಿದೆ. ಕಂಪನಿಯ ನಿವ್ವಳ ಲಾಭವು ₹ 9,008 ಕೋಟಿ ಆಗಿದೆ.

ಭಾರತದ ಅತಿದೊಡ್ಡ ಐ.ಟಿ. ಸೇವಾ ಕಂಪನಿಯಾಗಿರುವ ಟಿಸಿಎಸ್‌ ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹ 7,008 ಕೋಟಿ ಲಾಭ ಗಳಿಸಿತ್ತು. ಕಂಪನಿಯ ಆದಾಯದಲ್ಲಿ ಶೇಕಡ 18.5ರಷ್ಟು ಏರಿಕೆ ಆಗಿದೆ. ಹಿಂದಿನ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 38,322 ಕೋಟಿ ಆದಾಯ ಗಳಿಸಿದ್ದ ಕಂಪನಿಯು ಈ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 45,411 ಕೋಟಿ ಆದಾಯ ಗಳಿಸಿದೆ.

ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 20,409 ಜನರನ್ನು ಹೊಸದಾಗಿ ನೇಮಕ ಮಾಡಿಕೊಂಡಿದ್ದು, ಕಂಪನಿಯ ಒಟ್ಟು ನೌಕರರ ಸಂಖ್ಯೆಯು 5 ಲಕ್ಷ ದಾಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು