ಇಲಾನ್ ಮಸ್ಕ್ ಅತ್ಯಂತ ಶ್ರೀಮಂತ

ನ್ಯೂಯಾರ್ಕ್: ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಅವರು ಅಮೆಜಾನ್ ಕಂಪನಿಯ ಮುಖ್ಯಸ್ಥ ಜೆಫ್ ಬೆಜಾಸ್ ಅವರನ್ನು ಹಿಂದಿಕ್ಕಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.
ವಿದ್ಯುತ್ ಚಾಲಿತ ಕಾರುಗಳನ್ನು ತಯಾರಿಸುವ ಟೆಸ್ಲಾ ಕಂಪನಿಯಲ್ಲಿ ಮಸ್ಕ್ ಅವರು ಪ್ರಮುಖ ಷೇರುದಾರ ಕೂಡ ಹೌದು. ಟೆಸ್ಲಾ ಷೇರುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳದ ಪ್ರಯೋಜನವು ಮಸ್ಕ್ ಅವರಿಗೆ ದೊರೆತಿದೆ. ಮಸ್ಕ್ ಅವರ ಸಂಪತ್ತಿನ ಮೌಲ್ಯವು ₹ 13.58 ಲಕ್ಷ ಕೋಟಿ ಎಂದು ಸಿಎನ್‌ಬಿಸಿ ಅಂದಾಜಿಸಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.