ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಎಣ್ಣೆ ಆಮದು ಶೇ 30 ಇಳಿಕೆ

Last Updated 16 ಮಾರ್ಚ್ 2023, 5:19 IST
ಅಕ್ಷರ ಗಾತ್ರ

ಮುಂಬೈ : ತಾಳೆ ಎಣ್ಣೆ ಆಮದು ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಶೇಕಡ 30ರಷ್ಟು ಇಳಿಕೆ ಕಂಡಿದ್ದು, ಎಂಟು ತಿಂಗಳ ಕನಿಷ್ಠ ಮಟ್ಟ ತಲುಪಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ (ಎಸ್‌ಇಎ) ಹೇಳಿದೆ.

ಫೆಬ್ರುವರಿಯಲ್ಲಿ ತಾಳೆ ಎಣ್ಣೆ ಆಮದು 5.86 ಲಕ್ಷ ಟನ್‌ಗೆ ಇಳಿದಿದೆ. 2022ರ ಜೂನ್ ಬಳಿಕದ ಅತ್ಯಂತ ಕನಿಷ್ಠ ಪ್ರಮಾಣದ ಆಮದು ಇದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್‌–ಜನವರಿ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಂಡಿರುವುದೇ ಈಗ ಆಮದು ತಗ್ಗಿದ್ದಕ್ಕೆ ಕಾರಣ ಎಂದು ಅದು ಹೇಳಿದೆ. ತಾಳೆ ಎಣ್ಣೆ ಬೆಲೆಯು ಕಡಿಮೆ ಇದ್ದ ಕಾರಣಕ್ಕಾಗಿ ನವೆಂಬರ್‌–ಜನವರಿ ಅವಧಿಯಲ್ಲಿ ಆಮದು ಶೇ 86ರಷ್ಟು ಹೆಚ್ಚಾಗಿದೆ.

ಒಟ್ಟು ಅಡುಗೆ ಎಣ್ಣೆ ಆಮದು 2022ರ ಫೆಬ್ರುವರಿಗೆ ಹೋಲಿಸಿದರೆ 2023ರ ಫೆಬ್ರುವರಿಯಲ್ಲಿ ಶೇ 12ರಷ್ಟು ಹೆಚ್ಚಾಗಿದ್ದು 10.98 ಲಕ್ಷ ಟನ್‌ಗೆ ತಲುಪಿದೆ ಎಂದು ಎಸ್‌ಇಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT