ಮಂಗಳವಾರ, ನವೆಂಬರ್ 12, 2019
28 °C

ಟೋಲ್‌: ಇನ್ನು ಏಕರೂಪದ ವ್ಯವಸ್ಥೆ

Published:
Updated:

ನವದೆಹಲಿ: ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ಏಕರೂಪದ ಶುಲ್ಕ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಪ್ಪಂದ ಮಾಡಿಕೊಂಡಿವೆ.

ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರದ ಸಾರಿಗೆ ಸಚಿವರೊಂದಿಗೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದರು.

‘ತ್ವರಿತವಾಗಿ ಶುಲ್ಕ ಸಂಗ್ರಹಿಸುವ ಯೋಜನೆ ಇದಾಗಿದೆ. ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ ಟ್ಯಾಗ್‌ ತಂತ್ರಾಂಶ ಅಳವಡಿಸುವ ಮೂಲಕ ಆಯಾ ವಾಹನಗಳನ್ನು ನಿಲುಗಡೆ ಮಾಡದೆಯೇ ಹೆದ್ದಾರಿ ಶುಲ್ಕ ಪಡೆಯಲಾಗುವುದು. ಕರ್ನಾಟಕದ 32 ರಾಜ್ಯ ಹೆದ್ದಾರಿಗಳು, 44 ರಾಷ್ಟ್ರೀಯ ಹೆದ್ದಾರಿಗಳಲ್ಲಿ 2020ರ ಏಪ್ರಿಲ್‌ 1ರಿಂದ ಈ ಯೋಜನೆ ಜಾರಿಗೊಳ್ಳಲಿದೆ’ ಎಂದು ಅವರು ವಿವರಿಸಿದರು.

ಪ್ರತಿಕ್ರಿಯಿಸಿ (+)