ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ ಹೆಚ್ಚಿಸಲಿದೆ ಬಜೆಟ್‌: ಅಮೆರಿಕದ ವಾಣಿಜ್ಯೋದ್ಯಮಿಗಳ ಪ್ರತಿಕ್ರಿಯೆ

Last Updated 2 ಫೆಬ್ರುವರಿ 2020, 17:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಬಜೆಟ್‌ ನಿರ್ಧಾರಗಳಿಂದಾಗಿ ಭಾರತದಲ್ಲಿ ವಹಿವಾಟು ನಡೆಸುವುದು ಇನ್ನಷ್ಟು ಸರಳವಾಗಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹರಿದುಬರಲಿದೆ ಎಂದು ಅಮೆರಿಕದ ವಾಣಿಜ್ಯೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದ್ದು, ಭಾರತದಲ್ಲಿ ಹೂಡಿಕೆಗೆ ಸಂಬಂಧಿಸಿದ ಮುನ್ನೋಟವು ಉತ್ತಮವಾಗಿದೆ. ಈ ದೃಷ್ಟಿಯಿಂದ ಜಾಗತಿಕ ಹೂಡಿಕೆಯನ್ನು ಆಕರ್ಷಿಸುವಲ್ಲಿ ಬಜೆಟ್‌ ಉತ್ತಮ ಅವಕಾಶಗಳನ್ನು ಹೊಂದಿದೆ’ ಎಂದು ಅಮೆರಿಕ– ಭಾರತ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆಯ (ಯುಎಸ್‌ಐಎಸ್‌ಪಿಎಫ್‌) ಅಧ್ಯಕ್ಷ ಮುಕೇಶ್‌ ಅಗ್ನಿ ಹೇಳಿದ್ದಾರೆ.

‘ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಹೆಚ್ಚಿಸುವ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ವಿಮಾ ವಲಯಕ್ಕೆ ಬಂಡವಾಳದ ಅಗತ್ಯವಿದ್ದು, ಈ ವಲಯದ ಖಾಸಗೀಕರಣಕ್ಕೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿತ್ತು.

‘ಸರಳೀಕೃತ ಜಿಎಸ್‌ಟಿ ರಿಟರ್ನ್ಸ್, ಎಂಎಸ್‌ಎಂಇಗೆ ತೆರಿಗೆ ರಿಯಾಯ್ತಿಯಂತಹ ನಿರ್ಧಾರಗಳಿಂದ ವಹಿವಾಟು ನಡೆಸುವುದು ಇನ್ನಷ್ಟು ಸರಳವಾಗಲಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವೂ ಹೆಚ್ಚಾಗಲಿದೆ’ ಎಂದು ಹೇಳಿದ್ದಾರೆ.

‘₹ 350 ಲಕ್ಷ ಕೋಟಿ ಆರ್ಥಿಕತೆಯ ಗುರಿ ಸಾಧನೆಯ ನಿಟ್ಟಿನಲ್ಲಿ ಬಜೆಟ್‌ ಮಂಡನೆಯಾಗಿದೆ’ ಎಂದು ಅಮೆರಿಕ–ಭಾರತ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕರುಣ್‌ ರಿಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT