ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜಾರಿ ನಿರ್ದೇಶನಾಲಯದ ಬಗ್ಗೆ ಲೇವಡಿ ಮಾಡಿದ ವಿಜಯ್ ಮಲ್ಯ

ಟ್ವೀಟ್ ಮಾಡಿ ಅಸಮಾಧಾನ
Last Updated 27 ಜುಲೈ 2021, 16:33 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ವಿಜಯ್ ಮಲ್ಯ ಅವರು ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಘೋಷಿಸಿತ್ತು. ಆದರೆ ಈ ಬಗ್ಗೆ ವಿಜಯ್ ಮಲ್ಯ ಅವರು ಮಂಗಳವಾರ ಟ್ವೀಟ್ ಮಾಡುವ ಮೂಲಕ ಭಾರತದ ಜಾರಿ ನಿರ್ದೇಶನಾಲಯದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನನ್ನ 6200 ಕೋಟಿ ರೂಪಾಯಿ ಸಾಲಕ್ಕೆ ಈಗಾಗಲೇ ಭಾರತದ ಇ.ಡಿ ನನ್ನ 14 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 9 ಸಾವಿರ ಕೋಟಿ ರೂಪಾಯಿ ನಗದು ಹಾಗೂ 5 ಸಾವಿರ ಕೋಟಿ ರೂಪಾಯಿ ಇನ್ನಿತರ ಸೆಕ್ಯೂರಿಟಿ ಮೂಲಗಳದ್ದು. ಆದರೂ ಬ್ಯಾಂಕ್‌ಗಳಿಗೆ ಸಮಾಧಾನವಾಗಿಲ್ಲ. ಬ್ಯಾಂಕುಗಳು ನನ್ನನ್ನು ದಿವಾಳಿ ಎಂದು ಘೋಷಿಸಲು ನ್ಯಾಯಾಲಯಕ್ಕೆ ಬಲವಂತ ಮಾಡುತ್ತವೆ. ಹಾಗಾದರೆ, ಮುಟ್ಟುಗೋಲು ಹಾಕಿಕೊಂಡ ಹಣವನ್ನು ಇ.ಡಿ ಗೆ ಮರುಳಿಸುತ್ತವೆಯೇ? ಏಕೆಂದರೆ ಇ.ಡಿ ಅಸಾಮಾನ್ಯವಾದದ್ದು ಎಂದು ಇ.ಡಿ ಬಗ್ಗೆ ಲೇವಡಿ ಮಾಡಿದ್ದಾರೆ.

ಮಲ್ಯ ಅವರು ಬ್ರಿಟನ್ನಿನಲ್ಲಿ ಇದ್ದಾರೆ. ‘ಮಲ್ಯ ಅವರು ಸಾಲವನ್ನು ಅರ್ಜಿದಾರರಿಗೆ (ಬ್ಯಾಂಕ್‌ಗಳ ಒಕ್ಕೂಟ) ಪೂರ್ತಿಯಾಗಿ, ನಿಗದಿತ ಅವಧಿಯೊಳಗೆ ಹಿಂದಿರುಗಿಸುತ್ತಾರೆ ಎಂದು ಹೇಳಲು ಸಾಕಷ್ಟು ಆಧಾರಗಳಿಲ್ಲ’ ಎಂದು ಲಂಡನ್ ಹೈಕೋರ್ಟ್ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದರು.

‘ದಿವಾಳಿ’ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಲು ಅವಕಾಶ ಕೊಡಬೇಕು ಎಂಬ ಅರ್ಜಿಯನ್ನು ಮಲ್ಯ ಅವರು ಸಲ್ಲಿಸಿದರು. ಆದರೆ, ಮೇಲ್ಮನವಿಯು ಯಶಸ್ಸು ಕಾಣುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರು ಈ ಅರ್ಜಿಯನ್ನು ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT