ನವದೆಹಲಿ: ‘ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಮೂರು ಹೊಸ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡುವ ಗುರಿ ಇದೆ’ ಎಂದು ವಿದ್ಯುತ್ ಚಾಲಿತ ವಾಹನ ತಯಾರಿಕಾ ಕಂಪನಿ ವಿನ್ಫಾಸ್ಟ್ ಇಂಡಿಯಾದ ಸಿಇಒ ತಪನ್ ಘೋಷ್ ತಿಳಿಸಿದ್ದಾರೆ.

ಈ ವರ್ಷದಲ್ಲಿ ಕಂಪನಿಯ ವಾಹನಗಳ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗುವುದು ಎಂದು ಶನಿವಾರ ಹೇಳಿದ್ದಾರೆ.

ಕಳೆದ ವರ್ಷ ಕಂಪನಿಯು ತಮಿಳುನಾಡಿನಲ್ಲಿ ವಾಹನಗಳ ತಯಾರಿಕಾ ಘಟಕವನ್ನು ಆರಂಭಿಸಿತ್ತು. ಜೊತೆಗೆ ವಿಎಫ್6 ಮತ್ತು ವಿಫ್ 7 ಮಾದರಿಯ ವಿದ್ಯುತ್ಚಾಲಿತ ವಾಹನವನ್ನು ಬಿಡುಗಡೆ ಮಾಡಿತ್ತು.

2025ರ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 35 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ವರ್ಷದಲ್ಲಿ ಮಳಿಗೆಗಳ ಸಂಖ್ಯೆಯನ್ನು 75ಕ್ಕೆ ಹೆಚ್ಚಿಸಲಾಗುವುದು. ಕಂಪನಿಯು ಮೆಟ್ರೊ, 1 ಮತ್ತು 2ನೇ ಹಂತದ ನಗರಗಳಲ್ಲಿ ಈಗಾಗಲೇ ಮಳಿಗೆಗಳನ್ನು ಹೊಂದಿದೆ. ಮೂರು ಮತ್ತು ನಾಲ್ಕನೇ ಹಂತದ ಪ್ರದೇಶದಲ್ಲೂ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.