ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌–1ಬಿ ವೀಸಾ: ಗರಿಷ್ಠ ಸಂಖ್ಯೆಯಲ್ಲಿ ತಿರಸ್ಕೃತ

Last Updated 30 ಅಕ್ಟೋಬರ್ 2019, 19:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹೊಸದಾಗಿ ಸಲ್ಲಿಸಿದ ‘ಎಚ್‌–1ಬಿ’ ವೀಸಾಗಳ ಪೈಕಿ ಒಂದು ನಾಲ್ಕಾಂಶದಷ್ಟು ಕೋರಿಕೆಗಳನ್ನು ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕದ ಸರ್ಕಾರವು ತಿರಸ್ಕರಿಸಿದೆ.

ಹಣಕಾಸು ವರ್ಷ 2015ಕ್ಕೆ ಹೋಲಿಸಿದರೆ, 2019ರಲ್ಲಿ ತಿರಸ್ಕೃತಗೊಂಡ ವೀಸಾಗಳ ಪ್ರಮಾಣವು ಮೂರು ಪಟ್ಟು ಹೆಚ್ಚಾಗಿದೆ.

ಇದುವರೆಗೆ ‘ಎಚ್‌–1ಬಿ’ ವೀಸಾ ಪಡೆದವರಲ್ಲಿ ಭಾರತೀಯರ ಪಾಲು ಶೇ 70ರಷ್ಟಿದೆ. ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು ಅಮೆರಿಕದಲ್ಲಿನ ತಮ್ಮ ಗ್ರಾಹಕರಿಗೆ ಸ್ಥಳೀಯವಾಗಿಯೇ ಸೇವೆ ಸಲ್ಲಿಸಲು ಪರಿಣತ ತಂತ್ರಜ್ಞರಿಗಾಗಿ ಈ ವೀಸಾ ಪಡೆಯುತ್ತವೆ.

ವಿದೇಶಿ ತಂತ್ರಜ್ಞರು ಅಮೆರಿಕದಲ್ಲಿ ಕೆಲಸ ಮಾಡುವುದಕ್ಕೆ ಅನುಮತಿ ನೀಡಲು ‘ಎಚ್‌–1ಬಿ’ ವೀಸಾ ನೀಡಲಾಗುತ್ತಿದೆ.

ವೀಸಾ ತಿರಸ್ಕೃತಗೊಂಡ ಕಂಪನಿಗಳಲ್ಲಿ ಕಾಗ್ನಿಜಂಟ್‌ ಮುಂಚೂಣಿಯಲ್ಲಿ ಇದೆ. ನಂತರದ ಸ್ಥಾನದಲ್ಲಿ ಅಕ್ಸೆಂಚರ್‌, ವಿಪ್ರೊ ಮತ್ತು ಇನ್ಫೊಸಿಸ್‌ಗಳಿವೆ.

ಕೆಲಸದ ಅನುಮತಿ ನೀಡುವ ವೀಸಾಗಳನ್ನು ಗರಿಷ್ಠ ಪ್ರಮಾಣದಲ್ಲಿ ತಿರಸ್ಕರಿಸುವುದರಿಂದ ಸಾಫ್ಟ್‌ವೇರ್‌ ಕಂಪನಿಗಳ ವಹಿವಾಟಿಗೆ ಧಕ್ಕೆ ಒದಗಲಿದೆ. ಪರಿಣತ ತಂತ್ರಜ್ಞರಿಗೆ ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶಗಳೂ ಕಡಿಮೆಯಾಗಲಿವೆ ಎಂದು ವಲಸೆ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT