ಶುಕ್ರವಾರ, ಅಕ್ಟೋಬರ್ 23, 2020
21 °C

4ಜಿ ಅಪ್‌ಗ್ರೇಡ್‌ ಆರಂಭ: ವೊಡಾಫೋನ್‌ ಐಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 3ಜಿ ಸೇವೆ ಬಳಸುತ್ತಿರುವ ಗ್ರಾಹಕರನ್ನು 4ಜಿಗೆ ಅಪ್‌ಗ್ರೇಡ್‌ ಮಾಡುವ  ಕಾರ್ಯ ಆರಂಭಿಸಿರುವುದಾಗಿ ವೊಡಾಫೋನ್‌ ಐಡಿಯಾ ಕಂಪನಿ ಭಾನುವಾರ ತಿಳಿಸಿದೆ.

2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರನ್ನೂ 4ಜಿಗೆ ಅಪ್‌ಗ್ರೇಡ್‌ ಮಾಡುವ ಸಾಮರ್ಥ್ಯ ಕಂಪನಿಗೆ ಇದ್ದರೂ ಸದ್ಯದ ಮಟ್ಟಿಗೆ 2ಜಿ ಗ್ರಾಹಕರಿಗೆ ಧ್ವನಿ ಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದೆ.

ಜೂನ್‌ ಅಂತ್ಯದ ವೇಳೆಗೆ ಕಂಪನಿಯ ಮೊಬೈಲ್ ಸೇವೆಗಳ‌ ಬಳಕೆದಾರರ ಸಂಖ್ಯೆ 30.5 ಕೋಟಿ ಇದ್ದು, ಅದರಲ್ಲಿ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಸಂಖ್ಯೆ 11.6 ಕೋಟಿ ಇದೆ. ಇದರಲ್ಲಿ 10.4 ಕೋಟಿ 4ಜಿ ಹಾಗೂ 1.2 ಕೋಟಿ 3ಜಿ ಬಳಕೆದಾರರಿದ್ದಾರೆ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು