ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಬಾಬು ನಾಯ್ಡು ಒಡೆತನದ ಹೆರಿಟೇಜ್‌ ಷೇರಿನ ಮೌಲ್ಯ ಶೇ 55ರಷ್ಟು ಏರಿಕೆ!

ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಒಡೆತನದ ಹೆರಿಟೇಜ್‌ ಫುಡ್ಸ್‌ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 55ರಷ್ಟು ಏರಿಕೆಯಾಗಿದೆ.
Published 7 ಜೂನ್ 2024, 16:16 IST
Last Updated 7 ಜೂನ್ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಒಡೆತನದ ಹೆರಿಟೇಜ್‌ ಫುಡ್ಸ್‌ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 55ರಷ್ಟು ಏರಿಕೆಯಾಗಿದೆ.

ಲೋಕಸಭೆ ಮತ್ತು ಆಂಧ್ರದ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷವು ಜಯ ಸಾಧಿಸಿದೆ. ಚುನಾವಣೆಯ ಫಲಿತಾಂಶದ ಮುನ್ನಾ ದಿನವಾದ ಜೂನ್‌ 3ರಂದು ₹424 ಇದ್ದ ಷೇರಿನ ಮೌಲ್ಯವು ಶುಕ್ರವಾರದ ವಹಿವಾಟಿನಲ್ಲಿ ₹661ಕ್ಕೆ ಮುಟ್ಟಿದೆ.

ಹಾಗಾಗಿ, ಕಂಪನಿಯ ಪ್ರವರ್ತಕರಾದ ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರು ಕಂಪನಿಯಲ್ಲಿ 2.26 ಕೋಟಿ ಷೇರುಗಳನ್ನು ಹೊಂದಿ, ಸಂಪತ್ತಿನ ಮೌಲ್ಯ ₹579 ಕೋಟಿಗೆ ಮುಟ್ಟಿದೆ. ಪುತ್ರ ನಾರಾ ಲೋಕೇಶ್‌ 1 ಕೋಟಿಗೂ ಹೆಚ್ಚು ಷೇರುಗಳನ್ನು ಹೊಂದಿದ್ದು, ಅವರ ಸಂಪತ್ತಿನ ಮೌಲ್ಯ ₹237 ಕೋಟಿ ಆಗಿದೆ. 

1992ರಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಹಾಲು, ಹಾಲಿನ ಉತ್ಪನ್ನಗಳ ಮಾರಾಟಕ್ಕಾಗಿ ಚಂದ್ರಬಾಬು ನಾಯ್ಡು ಅವರು, ಈ ಕಂಪನಿ ಸ್ಥಾಪಿಸಿದ್ದರು.

ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ, ನವದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ ಹೈನು ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ ಎಂದು ಕಂಪನಿಯ ವೆಬ್‌ಸೈಟ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT