ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭದ ತೆರಿಗೆಯನ್ನು ₹2,100ರಿಂದ ₹1,850ಕ್ಕೆ ಇಳಿಸಿದೆ. ಶನಿವಾರದಿಂದ ಈ ಪರಿಷ್ಕೃತ ದರ ಜಾರಿಗೆ ಬಂದಿದೆ.
ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (ಎಸ್‌ಎಇಡಿ) ರೂಪದಲ್ಲಿ ಕೇಂದ್ರವು ಈ ತೆರಿಗೆ ವಿಧಿಸುತ್ತದೆ. ಆದರೆ, ರಫ್ತು ಮಾಡುವ ಡೀಸೆಲ್, ಪೆಟ್ರೋಲ್ ಮತ್ತು ವಿಮಾನ ಇಂಧನದ (ಎಟಿಎಫ್) ಮೇಲಿನ ಈ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಪ್ರತಿ ಹದಿನೈದು ದಿನಕ್ಕೊಮ್ಮೆ ಸರಾಸರಿ ತೈಲ ದರ ಆಧರಿಸಿ ಕೇಂದ್ರ ಸರ್ಕಾರವು ಆಕಸ್ಮಿಕ ಲಾಭದ ತೆರಿಗೆ ಬೆಲೆಯನ್ನು ಪರಿಷ್ಕರಣೆ ಮಾಡುತ್ತದೆ.