ಮಂಗಳವಾರ, ಜನವರಿ 18, 2022
27 °C

ಸವಾಲುಗಳೊಂದಿಗೆ ಸರ್ಕಾರದ ಜೊತೆ ಕೆಲಸ: ಟೆಸ್ಲಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತಮ್ಮ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಲವು ಸವಾಲುಗಳೊಂದಿಗೆ ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡಲಾಗುತ್ತಿದೆ ಎಂದು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್‌ ಹೇಳಿದ್ದಾರೆ.

ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಆರಂಭಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಟ್ವೀಟ್ ಮೂಲಕ ಈ ಉತ್ತರ ನೀಡಿದ್ದಾರೆ. ವಿದ್ಯುತ್ ಚಾಲಿತ ಕಾರುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಬೇಕು ಎಂದು ಮಸ್ಕ್ ಅವರು ಹಿಂದಿನ ವರ್ಷ ಆಗ್ರಹಿಸಿದ್ದರು.

‘ಮೊದಲು ಭಾರತದಲ್ಲಿ ತಯಾರಿಕೆ ಶುರು ಮಾಡಿ. ನಂತರದಲ್ಲಿ ಸುಂಕ ವಿನಾಯಿತಿ ಬಗ್ಗೆ ಪರಿಶೀಲಿಸಬಹುದು’ ಎಂದು ಕೇಂದ್ರ ಸರ್ಕಾರವು ಆಗ ಪ್ರತಿಕ್ರಿಯಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.