ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಸಂಘಟಿತ ವಲಯಕ್ಕೆ ₹ 3,716 ಕೋಟಿ ಸಾಲ: ವಿಶ್ವ ಬ್ಯಾಂಕ್

Last Updated 30 ಜೂನ್ 2021, 15:15 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಸಂಘಟಿತ ದುಡಿಯುವ ವಲಯವು ಕೋವಿಡ್‌ ಸಾಂಕ್ರಾಮಿಕದ ಸಂಕಷ್ಟದಿಂದ ಹೊರಬರಲು ಅನುಕೂಲ ಕಲ್ಪಿಸಲು ₹ 3,716 ಕೋಟಿ ಸಾಲ ಮಂಜೂರು ಮಾಡಿರುವುದಾಗಿ ವಿಶ್ವ ಬ್ಯಾಂಕ್‌ ಬುಧವಾರ ಹೇಳಿದೆ.

ಸದ್ಯದ ಸಾಂಕ್ರಾಮಿಕದ ಪರಿಸ್ಥಿತಿ, ಭವಿಷ್ಯದ ವಿಪತ್ತುಗಳನ್ನು ನಿಭಾಯಿಸಲು ಈ ಸಾಲವು ರಾಜ್ಯಗಳಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ ಎಂದು ವಿಶ್ವ ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ಒಟ್ಟಾರೆ ₹ 3,716 ಕೋಟಿ ಮೊತ್ತದಲ್ಲಿ ವಿಶ್ವ ಬ್ಯಾಂಕ್‌ನ ಅಂಗಸಂಸ್ಥೆಅಂತರರಾಷ್ಟ್ರೀಯ ಅಭಿವೃದ್ಧಿ ಸಂಘವು ₹ 836.10 ಕೋಟಿಯನ್ನು ಮತ್ತು ಅಂತರರಾಷ್ಟ್ರೀಯ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್‌ (ಐಬಿಆರ್‌ಡಿ) ₹ 2,879.90 ಕೋಟಿಯನ್ನು ಸಾಲವಾಗಿ ನೀಡಲಿವೆ.

ಸಾಲವು 18.5 ವರ್ಷಗಳ ಮುಕ್ತಾಯ ಅವಧಿ (ಮೆಚ್ಯುರಿಟಿ ಪಿರಿಯಡ್‌) ಹೊಂದಿದ್ದು, ಐದು ವರ್ಷಗಳ ಹೆಚ್ಚುವರಿ ಅವಧಿಯನ್ನೂ ಒಳಗೊಂಡಿದೆ.

ಸಾಂಕ್ರಾಮಿಕವು ಆರಂಭವಾದಾಗಿನಿಂದಲೂ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಹಾಯ ಮಾಡಲು ಭಾರತದ ಸಾಮಾಜಿಕ ಸಂರಕ್ಷಣಾ ಕಾರ್ಯಕ್ರಮಗಳನ್ನು ಬಲಪಡಿಸಲು ಒಟ್ಟಾರೆ ₹ 12,264.54 ಕೋಟಿ ಮೊತ್ತದ ನೆರವು ನೀಡಲಾಗಿದೆ ಎಂದು ಅದು ತಿಳಿಸಿದೆ.

ಬೀದಿ ಬದಿಯ ವ್ಯಾಪಾರಿಗಳು ಭಾರತದ ನಗರಗಳ ಅಸಂಘಟಿತ ಆರ್ಥಿಕತೆಯ ಭಾಗವಾಗಿದ್ದಾರೆ. ನ್ಯಾಷನಲ್‌ ಡಿಜಿಟಲ್‌ ಅರ್ಬನ್‌ ಮಿಷನ್‌ ಕಾರ್ಯಕ್ರಮವು ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಬಡ್ಡಿ ದರಕ್ಕೆ ಗರಿಷ್ಠ ₹ 10 ಸಾವಿರದವರೆಗೆ ದುಡಿಯುವ ಬಂಡವಾಳದ ಸಾಲ ಒದಗಿಸಲಿದೆ. ನಗರ ಸ್ಥಳೀಯ ಸಂಸ್ಥೆಗಳು ಐ.ಟಿ. ಆಧಾರಿತ ವೇದಿಕೆಯ ಮೂಲಕ ಅವರನ್ನು ಗುರುತಿಸಲಾಗುತ್ತದೆ. ಹೊಸ ಸಾಲ ಕಾರ್ಯಕ್ರಮದಿಂದ ನಗರ ಪ್ರದೇಶಗಳ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT