ಗುರುವಾರ , ಡಿಸೆಂಬರ್ 5, 2019
19 °C
ಮೂರೂವರೆ ವರ್ಷದಲ್ಲಿನ ಕನಿಷ್ಠ ಮಟ್ಟ

ಸಗಟು ಹಣದುಬ್ಬರ ಇಳಿಕೆ

Published:
Updated:

ನವದೆಹಲಿ: ಸಗಟು ಬೆಲೆ ಆಧರಿಸಿದ ಹಣದುಬ್ಬರವು (ಡಬ್ಲ್ಯುಪಿಐ) ಸೆಪ್ಟೆಂಬರ್‌ನಲ್ಲಿದ್ದ ಶೇ 0.33 ರಿಂದ ಅಕ್ಟೋಬರ್‌ನಲ್ಲಿ ಶೇ 0.16ಕ್ಕೆ ಇಳಿದಿದೆ.

ಮೂರೂವರೆ ವರ್ಷದಲ್ಲಿನ ಅತಿಕಡಿಮೆ ಮಟ್ಟ ಇದಾಗಿದೆ. ಆಹಾರಯೇತರ ಪದಾರ್ಥಗಳು ಅಗ್ಗವಾಗಿರುವುದು ಮತ್ತು ತಯಾರಿಕಾ ಸರಕುಗಳ ಬೆಲೆ ಕುಸಿತವಾಗಿರುವುದರಿಂದ ‘ಡಬ್ಲ್ಯುಪಿಐ’ ಇಳಿಕೆಯಾಗಿದೆ.

ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಶೇ 9.80 ಮತ್ತು ಆಹಾರಯೇತರ ಪದಾರ್ಥಗಳ ಬೆಲೆ ಹೆಚ್ಚಳವು ಶೇ 2.35ರಷ್ಟಿತ್ತು. ತಯಾರಿಕಾ ಸರಕುಗಳ ‘ಡಬ್ಲ್ಯುಪಿಐ’ ಅಕ್ಟೋಬರ್‌ನಲ್ಲಿ ಶೇ (–) 0.84ರಷ್ಟಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ. ಮಾಸಿಕ ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರವು 2018ರ ಅಕ್ಟೋಬರ್‌ನಲ್ಲಿ ಶೇ 5.54ರಷ್ಟಿತ್ತು.

‘ಡಬ್ಲ್ಯುಪಿಐ’ ನಿರಂತರವಾಗಿ ಕುಸಿತ ಕಾಣುತ್ತಿರುವುದಕ್ಕೆ ಪ್ರಮುಖ ಸರಕುಗಳಾದ ಇಂಧನ, ವಿದ್ಯುತ್‌, ಖನಿಜ, ಪೆಟ್ರೋಲಿಯಂ, ನೈಸರ್ಗಿಕ ಅನಿಲದ ಬೆಲೆ ಕಡಿಮೆಯಾಗಿರುವುದು ಕಾರಣವಾಗಿದೆ. ತಯಾರಿಕೆ, ಲೋಹ ಮತ್ತು ರಾಸಾಯನಿಕ ಉತ್ಪನ್ನಗಳ ಬೇಡಿಕೆ ಕಡಿಮೆಯಾಗಿವುದು ಸಗಟು ಬೆಲೆ ಏರಿಕೆಯ ಅಂಕಿ ಅಂಶಗಳಲ್ಲಿ ಪ್ರತಿಫಲನಗೊಂಡಿದೆ’ ಎಂದು ಎಂಕೆ ಗ್ಲೋಬಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಕರೆನ್ಸಿ ಸಂಶೋಧನಾ ಮುಖ್ಯಸ್ಥ ರಾಹುಲ್‌ ಗುಪ್ತಾ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು