ನವದೆಹಲಿ: ಸಗಟು ಮಾರಾಟ ದರವನ್ನು (ಡಬ್ಲ್ಯೂಪಿಐ) ಆಧರಿಸಿದ ಹಣದುಬ್ಬರ ದರವು ಜುಲೈ ತಿಂಗಳಲ್ಲಿ (–)0.58ರಷ್ಟು ಇತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ. ತರಕಾರಿ ಮತ್ತು ಇತರ ಆಹಾರ ವಸ್ತುಗಳು ದುಬಾರಿ ಆಗಿದ್ದರೂ, ಡಬ್ಲ್ಯೂಪಿಐ ಹಣದುಬ್ಬರವು ನಾಲ್ಕು ತಿಂಗಳುಗಳಿಂದ ನಕಾರಾತ್ಮಕ ಮಟ್ಟದಲ್ಲಿ ಇದೆ.

ಆಹಾರ ವಸ್ತುಗಳ ಹಣದುಬ್ಬರವು ಜುಲೈನಲ್ಲಿ ನಾಲ್ಕು ತಿಂಗಳಲ್ಲೇ ಅತ್ಯಧಿಕವಾದ ಶೇಕಡ 4.08ರಷ್ಟಿತ್ತು. ಇದಕ್ಕೆ ಮುಖ್ಯ ಕಾರಣ ತರಕಾರಿಗಳ ಬೆಲೆಯಲ್ಲಿ ಆದ ತೀವ್ರ ಹೆಚ್ಚಳ. ಜುಲೈನಲ್ಲಿ ತರಕಾರಿಗಳ ಬೆಲೆಯಲ್ಲಿನ ಹೆಚ್ಚಳದ ಪ್ರಮಾಣವು ಶೇ 8.20ರಷ್ಟು ಇತ್ತು.

ಪ್ರೊಟೀನ್ ಅಂಶ ಹೆಚ್ಚಿರುವ ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆಯಲ್ಲಿ ಶೇ 5.27ರಷ್ಟು ಹೆಚ್ಚಳ ಆಗಿದೆ. ಕಳೆದ ವಾರ ನಡೆದ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ, ರೆಪೊ ದರದಲ್ಲಿ ಬದಲಾವಣೆ ತಂದಿರಲಿಲ್ಲ. ರಿಟೇಲ್ ಹಣದುಬ್ಬರವು ಅಕ್ಟೋಬರ್–ಮಾರ್ಚ್ ಅವಧಿಯಲ್ಲಿ ತುಸು ತಗ್ಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.