ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ ಆ್ಯಪ್‌ನಲ್ಲೂ ಸ್ಟಿಕ್ಕರ್‌ಗಳು!

Last Updated 13 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಸಂದೇಶ ಮತ್ತು ವಿಡಿಯೊ ಕರೆಗಳನ್ನು ಮಾಡಲು ನೆರವಾಗುವ ವಾಟ್ಸ್‌ಆ್ಯಪ್ ಮೆಸೆಂಜರ್‌, ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆಯಾಗುತ್ತಾ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುತ್ತಿದೆ. ಈಚೆಗಷ್ಟೇ ಈ ಸಂಸ್ಥೆಯು ಗ್ರೂಪ್ ಕಾಲಿಂಗ್ ವ್ಯವಸ್ಥೆಯನ್ನು ಬಳಕೆಗೆ ತಂದು ಗಮನ ಸೆಳೆದಿತ್ತು. ಈಗ ಹೊಸದಾಗಿ ಸ್ಟಿಕರ್ಸ್‌ಗಳನ್ನು ಬಳಕೆಗೆ ತಂದಿದೆ.

ನಾವು ಗ್ರಾಹಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುವ ಕಡೆಗೆ ಹೆಚ್ಚು ಗಮನಹರಿಸುತ್ತೇವೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಇನ್ನಷ್ಟು ಉತ್ತಮವಾಗಿ ಸಂವಹನ ನಡೆಸಲು ನೆರವಾಗುವಂತೆ ಈಗ ಸ್ಟಿಕ್ಕರ್‌ಗಳನ್ನು ಬಳಕೆಗೆ ತರಲು ಉತ್ಸುಕರಾಗಿದ್ದೇವೆ ಎಂದು ಈಚೆಗಷ್ಟೇ ವಾಟ್ಸ್‌ಆ್ಯಪ್ ತನ್ನ ಬ್ಲಾಗ್‌ನಲ್ಲಿ ಪ್ರಕಟಿಸಿತ್ತು. ಐಒಎಸ್‌ ಬಳಕೆದಾರರಿಗೆ ಈ ಸೌಲಭ್ಯ ಈಗಾಗಲೇ ದೊರೆತಿದ್ದು, ಆಂಡ್ರಾಯ್ಡ್ ಬಳಕೆದಾರರು ಕೆಲವು ವಾರ ಕಾಯಬೇಕಾಗುತ್ತದೆ. ಕೂಡಲೇ ಸೌಲಭ್ಯ ಪಡೆಯಬೇಕಿದ್ದರೆ, ವಾಟ್ಸ್‌ಆ್ಯಪ್ ಬೇಟಾ ಮೂಲಕ ಪಡೆಯಬಹುದು.

ಹುಡುಕುವುದು ಹೇಗೆ?

ವಾಟ್ಸ್‌ಆ್ಯಪ್ ಅಪ್‌ಡೇಟ್‌ ಮಾಡಿದ ಮೇಲೆ ಎಮೊಜಿ ಐಕಾನ್ ಮೇಲೆ ಕ್ಲಿಕ್ಕಿಸಿದರೆ, ಎಮೊಜಿ ಮೆನು ತೆರೆದುಕೊಳ್ಳುತ್ತದೆ. ಅದರ ಪಕ್ಕದಲ್ಲೇ ಜಿಫ್‌ಗಳು ಇರುತ್ತವೆ. ಅದರ ಪಕ್ಕದಲ್ಲೇ ಸ್ಟಿಕ್ಕರ್ಸ್ ಐಕಾನ್‌ ಕಾಣಿಸುತ್ತದೆ. ಇದರಲ್ಲಿ ಮೂರು ವಿಭಾಗಗಳಿದ್ದು, ಈಚೆಗೆ ಬಳಸಿದ ಸ್ಟಿಕ್ಕರ್‌ಗಳು, ನಿಮ್ಮ ಫೇವರೇಟ್ ಸ್ಟಿಕ್ಕರ್‌ಗಳು ಮತ್ತು ಒಟ್ಟಾರೆ ಸ್ಟಿಕ್ಕರ್‌ಗಳು ಎಂದು ವಿಭಜಿಸಬಹುದು. ಇದರ ಪಕ್ಕದಲ್ಲೇ ಪ್ಲಸ್‌ ಐಕಾನ್‌ ಇದ್ದು, ಅದರ ಮೂಲಕ ಹೊಸ ಸ್ಟಿಕ್ಕರ್‌ಗಳನ್ನೂ ಸೇರಿಸಬಹುದು.

ನಿಮ್ಮದೇ ಆದ ಕೆಲವು ಸ್ಟಿಕ್ಕರ್‌ಗಳನ್ನು ನೀವೇ ತಯಾರಿಸಿಕೊಳ್ಳಬಹುದು. ಸ್ಟಿಕ್ಕರ್‌ಗಳನ್ನು ತಯಾರಿಸುವ ಬಗ್ಗೆ ವಾಟ್ಸ್‌ಆ್ಯಪ್ ಕೈಪಿಡಿ ಹೊರಡಿಸಿದೆ. ಆದರೆ ಇದಕ್ಕೆ ಹಣ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲ ಅಡೊಬಿ ಫೋಟೊಶಾಪ್ ಮತ್ತು ಇಮೇಜ್ ಎಡಿಟಿಂಗ್ ಜ್ಞಾನವೂ ಇರಬೇಕಾಗುತ್ತದೆ. ಈ ಸ್ಟಿಕ್ಕರ್‌ಗಳ ರೆಸಲ್ಯೂಷನ್ 512X512 ಪಿಕ್ಸೆಲ್ ಇರಬೇಕು. ಹಾಗೂ 100ಕೆ.ಬಿ ಸಾಮರ್ಥ್ಯ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT