ಮ್ಯೂಚುವಲ್ ಫಂಡ್ (ಎಂ.ಎಫ್) ಹೂಡಿಕೆದಾರರಿಗೆ ಸಿಹಿ ಸುದ್ದಿಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನೀಡಿದೆ. ಮ್ಯೂಚುವಲ್ ಫಂಡ್ ಹೂಡಿಕೆಗಳ ಮೇಲಿನ ವೆಚ್ಚ ಅನುಪಾತವನ್ನು (ಎಕ್ಸ್ಪೆನ್ಸ್ ರೇಷಿಯೊ/ಕಮಿಷನ್) ಅದು ತಗ್ಗಿಸಿದೆ. 2025ರ ಡಿಸೆಂಬರ್ 17ರಂದು ಸೆಬಿ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೇವಲ 15 ಮೂಲಾಂಶಗಳಷ್ಟು (ಶೇ 0.15ರಷ್ಟು) ವೆಚ್ಚ ಕಡಿತ ಮಾಡಲಾಗಿದೆ. ನೋಡಲು ಇದೊಂದು ಸಣ್ಣ ಬದಲಾವಣೆಯಂತೆ ಕಂಡರೂ ದೀರ್ಘಾವಧಿ ಹೂಡಿಕೆ ಮಾಡುವವರಿಗೆ ಈ ವೆಚ್ಚ ಅನುಪಾತ ಕಡಿತ ಬಹಳಷ್ಟು ಅನುಕೂಲ ಒದಗಿಸಲಿದೆ.

ಸೆಬಿ ತಂದಿರುವ ಈ ಬದಲಾವಣೆ ಏನು? ಹೂಡಿಕೆಗಳ ಮೇಲೆ ಆಗುವ ಪರಿಣಾಮವೇನು? ಹೂಡಿಕೆ ಮೇಲಿನ ಲಾಭದ ಪ್ರಮಾಣದಲ್ಲಾಗುವ ಬದಲಾವಣೆ ಎಷ್ಟು?

ಬದಲಾವಣೆ ಏನು?: ಸೆಬಿ ಒಟ್ಟಾರೆ ಮ್ಯೂಚುವಲ್ ಫಂಡ್ಗಳ ವೆಚ್ಚ ಅನುಪಾತವನ್ನು 15 ಮೂಲಾಂಶಗಳಷ್ಟು ಕಡಿತಗೊಳಿಸಿದೆ. ಇಂಡೆಕ್ಸ್ ಫಂಡ್ಸ್/ಇಟಿಎಫ್ಗಳಿಗೆ ವೆಚ್ಚ ಅನುಪಾತವನ್ನು
ಶೇ 1ರಿಂದ ಶೇ 0.90ಕ್ಕೆ ಇಳಿಸಲಾಗಿದೆ. ಲಿಕ್ವಿಡ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಫಂಡ್ ಆಫ್ ಫಂಡ್ಗಳು, ಇಂಡೆಕ್ಸ್ ಫಂಡ್ಗಳು ಮತ್ತು ಇಟಿಎಫ್ಗಳ ವೆಚ್ಚ ಅನುಪಾತವನ್ನೂ ಶೇ 1ರಿಂದ ಶೇ 0.90ಕ್ಕೆ ನಿಗದಿಪಡಿಸಲಾಗಿದೆ. ಶೇ 65 ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ಈಕ್ವಿಟಿ ಸಂಬಂಧಿತ ಹೂಡಿಕೆಗಳಲ್ಲಿ ತೊಡಗಿಸುವ ಫಂಡ್ ಆಫ್ ಫಂಡ್ಗಳ ವೆಚ್ಚ ಅನುಪಾತ ಶೇ 2.25ರಿಂದ ಶೇ 2.10ಕ್ಕೆ ಇಳಿದಿದೆ. ಇತರೆ ಫಂಡ್ ಆಫ್ ಫಂಡ್ಗಳ ವೆಚ್ಚ ಅನುಪಾತ ಶೇ 2ರಿಂದ ಶೇ 1.85ಕ್ಕೆ ತಗ್ಗಿದೆ. (ಇನ್ನಷ್ಟು ವಿವರಕ್ಕಾಗಿ ಪಟ್ಟಿ1ನ್ನು ಗಮನಿಸಿ)

ಬೇಸ್ ಎಕ್ಸ್ಪೆನ್ಸ್ ರೇಷಿಯೊ: ಈ ಮೊದಲು ಹೂಡಿಕೆದಾರರು ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆ ಶುಲ್ಕಗಳನ್ನು ಒಟ್ಟು ವೆಚ್ಚ ಅನುಪಾತದ (ಟಿಇಆರ್ - ಟೋಟಲ್ ಎಕ್ಸ್ಪೆನ್ಸ್ ರೇಷಿಯೊ) ಮೂಲಕ ಅಳೆಯುತ್ತಿದ್ದರು. ಇದರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಮೇಲೆ ಆಗುವ ವಿವಿಧ ವೆಚ್ಚಗಳನ್ನು ಒಟ್ಟಾಗಿ ನೋಡಲಾಗುತ್ತಿತ್ತು. ಒಟ್ಟು ವೆಚ್ಚ ಅನುಪಾತ ಪದ್ಧತಿಯಲ್ಲಿ ಮ್ಯೂಚುವಲ್ ಫಂಡ್ ಸಂಸ್ಥೆಗೆ ಎಷ್ಟು ಶುಲ್ಕ ಹೋಗುತ್ತಿದೆ ಎಂದು ನೇರವಾಗಿ ಗೊತ್ತಾಗುತ್ತಿರಲಿಲ್ಲ. ಈಗ ಅದನ್ನು ತಪ್ಪಿಸಲು ಬೇಸ್ ಎಕ್ಸ್ಪೆನ್ಸ್ ರೇಷಿಯೊ ತರಲಾಗಿದೆ. ಬೇಸ್ ಎಕ್ಸ್ಪೆನ್ಸ್ ರೇಷಿಯೊ ಎಂದರೆ ಫಂಡ್ನ ನಿರ್ವಹಣೆಗೆ ಬೇಕಾಗುವ ಖರ್ಚುಗಳನ್ನಷ್ಟೇ ಒಳಗೊಂಡಿರುವ ಪ್ರಮಾಣ.

ಇದರಲ್ಲಿ ಸಾಮಾನ್ಯವಾಗಿ ನಿಧಿ ನಿರ್ವಾಹಕನ ಶುಲ್ಕ, ವಿತರಕರ ಕಮಿಷನ್, ಆಡಳಿತ ವೆಚ್ಚಗಳು ಮಾತ್ರ ಇರುತ್ತವೆ. ಜಿಎಸ್ಟಿ, ಮುದ್ರಾಂಕ ಶುಲ್ಕ, ಷೇರು ವಹಿವಾಟು ತೆರಿಗೆ, ಎಕ್ಸ್ಚೇಂಜ್/ರೆಗ್ಯುಲೇಟರಿ ವೆಚ್ಚಗಳು ಹಾಗೂ ಇನ್ನಿತರ ಸಂಬಂಧಿತ ವೆಚ್ಚಗಳನ್ನು ಬೇಸ್ ಎಕ್ಸ್ಪೆನ್ಸ್ ರೇಷಿಯೊದಿಂದ ಹೊರಗೆ ತೋರಿಸಲಾಗುತ್ತದೆ. ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ ಮ್ಯೂಚುವಲ್ ಫಂಡ್ ಹೂಡಿಕೆದಾರನಿಂದ ಫಂಡ್ ಹೌಸ್ ನಿಜವಾಗಿ ತೆಗೆದುಕೊಳ್ಳುವ ಶುಲ್ಕ ಬೇಸ್ ಎಕ್ಸ್ಪೆನ್ಸ್ ರೇಷಿಯೊ. ಬೇಸ್ ಎಕ್ಸ್ಪೆನ್ಸ್ ರೇಷಿಯೊ ಒಳಗೊಂಡು ಹೂಡಿಕೆದಾರನಿಗೆ ಕೊನೆಯಲ್ಲಿ ಆಗುವ ಒಟ್ಟು ವಾರ್ಷಿಕ ವೆಚ್ಚವನ್ನು ಈಗ ಒಟ್ಟು ವೆಚ್ಚ ಅನುಪಾತ ಎಂದು ಪರಿಗಣಿಸಲಾಗುತ್ತದೆ.

ಆಗುವ ಲಾಭವೇನು?: ಎಕ್ಸ್ಪೆನ್ಸ್ ರೇಷಿಯೊವನ್ನು ಸೆಬಿ 10ರಿಂದ 15 ಮೂಲಾಂಶದಷ್ಟು ಕಡಿತ ಮಾಡಿರುವುದಿಂದ ಆಗುವ ಲಾಭವೇನು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ದೀರ್ಘಾವಧಿಗೆ ಹೂಡಿಕೆ ಮಾಡುವಾಗ ಸಣ್ಣ ಕಡಿತವೂ ದೊಡ್ಡ ಪರಿಣಾಮ ಬೀರುತ್ತದೆ. ಉದಾಹರಣೆಗೆ 15 ವರ್ಷಕ್ಕೆ ಮ್ಯೂಚುವಲ್ ಫಂಡ್ನಲ್ಲಿ ₹10 ಲಕ್ಷವನ್ನು ಒಂದೇ ಬಾರಿಗೆ ಹೂಡಿಕೆ ಮಾಡುತ್ತೀರಿ, ಶೇ 12ರಷ್ಟು ವಾರ್ಷಿಕ ಗಳಿಕೆ ಸಿಗುತ್ತದೆ ಎಂದು ಭಾವಿಸಿ. ಈ ಪ್ರಕಾರ 15 ವರ್ಷಗಳಲ್ಲಿ ಶೇ 1.5ರಷ್ಟು ವೆಚ್ಚ ಅನುಪಾತವಿದ್ದರೆ ನಿಮಗೆ ₹43.63 ಲಕ್ಷ ದಕ್ಕುತ್ತದೆ. ಅದೇ ಶೇ 1.3ರ ವೆಚ್ಚ ಅನುಪಾತ ಅನ್ವಯವಾದರೆ ₹44.9 ಲಕ್ಷ ಲಭಿಸುತ್ತದೆ. ಅಂದರೆ ₹1.34 ಲಕ್ಷ ಹೆಚ್ಚುವರಿಯಾಗಿ ನಿಮ್ಮದಾಗುತ್ತದೆ. (ಇನ್ನಷ್ಟು ವಿವರಕ್ಕಾಗಿ ಪಟ್ಟಿ2ನ್ನು ಗಮನಿಸಿ)

ನೆನಪಿಡಿ: ಅಲ್ಪಾವಧಿಗೆ ಹೂಡಿಕೆ ಮಾಡಿದಾಗ ವೆಚ್ಚ ಅನುಪಾತ ಕಡಿತದಿಂದ ದೊಡ್ಡ ಪ್ರಮಾಣದ ಲಾಭ ಸಿಗುವುದಿಲ್ಲ. ಆದರೆ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ಸೆಬಿ ಮಾಡಿರುವ ವೆಚ್ಚ ಅನುಪಾತ ಕಡಿತದ ಲಾಭ ಉತ್ತಮ ರೀತಿಯಲ್ಲಿ ಹೂಡಿಕೆದಾರನಿಗೆ ತಲುಪುತ್ತದೆ. ಅಂದರೆ ಈ ಬದಲಾವಣೆಯಿಂದ ಹೂಡಿಕೆದಾರನಿಗೆ ಅನುಕೂಲವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.