ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ‘ಕೆವೈಸಿ’ಗೆ ಆರ್‌ಬಿಐ ಅನುಮತಿ

7

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ‘ಕೆವೈಸಿ’ಗೆ ಆರ್‌ಬಿಐ ಅನುಮತಿ

Published:
Updated:

ಬೆಂಗಳೂರು: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ (ಪಿಪಿಬಿಎಲ್‌), ತನ್ನ ತಿಳಿಯಿರಿ ನಿಮ್ಮ ಗ್ರಾಹಕರು (ಕೆವೈಸಿ) ಪ್ರಕ್ರಿಯೆಗೆ ಮತ್ತು ಉಳಿತಾಯ ಹಾಗೂ ಚಾಲ್ತಿ ಖಾತೆ ತೆರೆಯುವುದಕ್ಕೆ ಮತ್ತೆ ಚಾಲನೆ ನೀಡಿದೆ.

ಪೇಟಿಎಂ ಮೊಬೈಲ್‌ ವಾಲೆಟ್‌ ಮತ್ತು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಲು  ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ನೀಡಿದೆ. ಆಸಕ್ತ ಗ್ರಾಹಕರು ಇನ್ನು ಮುಂದೆ ಹೊಸ ಖಾತೆ ತೆರೆಯಬಹುದಾಗಿದೆ. ಈ ವರ್ಷಾಂತ್ಯದ ವೇಳೆಗೆ 10 ಕೋಟಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಲು ಗುರಿ ನಿಗದಿಪಡಿಸಲಾಗಿದೆ ಎಂದು ‘ಪಿಪಿಬಿಎಲ್’ ತಿಳಿಸಿದೆ.

ಉಳಿತಾಯ ಖಾತೆಯಲ್ಲಿನ ಠೇವಣಿಗೆ ಶೇಕಡ 4ರಷ್ಟು ಬಡ್ಡಿ ಸಿಗಲಿದೆ. ಉಳಿತಾಯ ಖಾತೆಗಳಲ್ಲಿ ಗ್ರಾಹಕರು ಗರಿಷ್ಠ ₹ 1 ಲಕ್ಷದವರೆಗೆ ಠೇವಣಿ ಇಡಬಹುದಾಗಿದೆ. 

ನೇಮಕ: ಬ್ಯಾಂಕಿಂಗ್ ಪರಿಣತ ಸತೀಶ್ ಗುಪ್ತ ಅವರನ್ನು ‘ಪಿಪಿಬಿಎಲ್‌’ನ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !