ನನ್ನ ತಂದೆಯವರು 2010ರಲ್ಲಿ ₹25 ಲಕ್ಷಕ್ಕೆ ಕೊಂಡ ಜಮೀನು ಹಾಗೂ ಅದರಲ್ಲಿ ಇತ್ತೀಚೆಗೆ ಕಟ್ಟಿಸಿದ ಮನೆಯನ್ನು ನಾನು ಮಾರಾಟ ಮಾಡಲಿದ್ದೇನೆ. ಈ ಮನೆಯನ್ನು 2024ರ ಡಿಸೆಂಬರ್‌ನಲ್ಲಿ ನಿರ್ಮಿಸಲಾಗಿತ್ತು. ಕಾರಣಾಂತರಗಳಿಂದ ಈ ಮನೆ ಮಾರಬೇಕಾಗಿದೆ. ಮನೆ ನಿರ್ಮಾಣಕ್ಕೆ ₹35 ಲಕ್ಷ ಖರ್ಚಾಗಿದೆ. ಈಗ ಅಂದಾಜು ₹1 ಕೋಟಿ ಈ ಮನೆ ಮಾರಾಟದಿಂದ ಬರಬಹುದು. ನಾನು ವೈಯಕ್ತಿಕವಾಗಿ ಯಾವುದೇ ಮೊತ್ತ ವ್ಯಯಿಸಿಲ್ಲ. ಆದರೆ ನನ್ನ ತಂದೆ ಹಣ ಹೂಡಿದ್ದರು. ನನ್ನ ಪ್ರಶ್ನೆ ಏನೆಂದರೆ, ಈ ಲಾಭ ಯಾವ ವರ್ಗದ ಬಂಡವಾಳ ಲಾಭದ ಅಡಿ ತೆರಿಗೆಗೊಳಪಡುತ್ತದೆ? ಇದಕ್ಕೆ ತೆರಿಗೆ ಹೇಗೆ ಅನ್ವಯಿಸುತ್ತದೆ?
-ರಾಜೀವ್, ಮೈಸೂರು ರಸ್ತೆ, ಬೆಂಗಳೂರು