ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷಗಳ ನಂತರ ಟಾಟಾ ಟೆಕ್ ಐಪಿಒ: ಸೆಬಿ ಅನುಮತಿ

Published 27 ಜೂನ್ 2023, 7:24 IST
Last Updated 27 ಜೂನ್ 2023, 7:24 IST
ಅಕ್ಷರ ಗಾತ್ರ

ಮುಂಬೈ: ಟಾಟಾ ಸಮೂಹದ ಟಾಟಾ ಟೆಕ್ನಾಲಜೀಸ್‌ನ ಷೇರುಗಳನ್ನು ಸಾರ್ವಜನಿಕ ಖರೀದಿಗೆ ಐಪಿಒ ಮೂಲಕ ಅವಕಾಶ ಕಲ್ಪಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ಸೂಚಿಸಿದೆ. 20 ವರ್ಷಗಳಲ್ಲಿ ಟಾಟಾ ಸಮೂಹದ ಮೊದಲ ಐಪಿಒ ಇದಾಗಿದೆ.

ಟಾಟಾ ಟೆಕ್ನಾಲಜೀಸ್‌ ಜತೆಗೆ ಎಸ್‌ಬಿಎಫ್‌ಸಿ ಫೈನಾನ್ಸ್ ಹಾಗೂ ಗಾಂಧಾರ ಆಯಿಲ್ ರಿಫೈನರೀಸ್ ಕಂಪನಿಗಳ ಐಪಿಒಗೂ ಸೆಬಿ ಅನುಮತಿ ನೀಡಿದೆ.

ಕಳೆದ ಮಾರ್ಚ್‌ನಲ್ಲಿ ಐಪಿಒಗಾಗಿ ಟಾಟಾ ಕೋರಿಕೆ ಸಲ್ಲಿಸಿತ್ತು. ಇದರಲ್ಲಿ ಕಂಪನಿಯು ಟಾಟಾ ಟೆಕ್ನಾಲಜೀಸ್‌ನ ಒಟ್ಟು 9.57 ಕೋಟಿ ಷೇರುಗಳು, ಟಾಟಾ ಮೋಟಾರ್ಸ್‌ನ 8.11 ಕೋಟಿ ಷೇರು, ಆಲ್ಫಾ ಟಿಸಿ ಹೋಲ್ಡಿಂಗ್ಸ್‌ನ 97 ಲಕ್ಷ ಷೇರು ಹಾಗೂ ಟಾಟಾ ಕ್ಯಾಪಿಟಲ್ ಗ್ರೋತ್‌ ಫಂಡ್‌ನ 4.86ಲಕ್ಷ ಷೇರುಗಳು ಇದರಲ್ಲಿ ಸೇರಿವೆ.

ಸದ್ಯ, ಟಾಟಾ ಮೋಟಾರ್ಸ್‌ ಶೇ 74.69ರಷ್ಟು ಪಾಲುದಾರಿಕೆ ಹೊಂದಿದೆ. ಆಲ್ಫಾ ಟಿಸಿ ಶೇ 7.26 ಹಾಗೂ ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್‌ ಶೇ 3.46 ಪಾಲುದಾರಿಕೆ ಹೊಂದಿವೆ. ಸೆಬಿಎಫ್‌ಸಿ ಫೈನಾನ್ಸ್ ಕಂಪನಿಯು ಐಪಿಒ ಮೂಲಕ ₹1200ಕೋಟಿ ಸಂಗ್ರಹಿಸಲು ಮುಂದಾಗಿದೆ. ಗಾಂಧಾರ ಆಯಿಲ್ ರಿಫೈನರಿ ಕಂಪನಿಯು 1.2 ಕೋಟಿ ಷೇರುಗಳ ಮೂಲಕ ₹357 ಕೋಟಿ ಸಂಗ್ರಹಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT