ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.19 ರಿಂದ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್‌ ವ್ಯಾಪಾರ ಮೇಳ

Published 11 ಆಗಸ್ಟ್ 2023, 14:17 IST
Last Updated 11 ಆಗಸ್ಟ್ 2023, 14:17 IST
ಅಕ್ಷರ ಗಾತ್ರ

ಜೋಹನ್ಸ್‌ಬರ್ಗ್‌: ಬ್ರಿಕ್ಸ್‌ ಶೃಂಗಸಭೆಯ ಜೊತೆಗೆ ದಕ್ಷಿಣ ಆಫ್ರಿಕಾವು ನಾಲ್ಕು ದಿನಗಳ ವ್ಯಾಪಾರ ಮೇಳವನ್ನೂ ಆಯೋಜಿಸಲಿದೆ.

ಇದೇ 19ರಿಂದ 23ರ ವರೆಗೆ ನಡೆಯಲಿರುವ ಬ್ರಿಕ್ಸ್‌ ವ್ಯಾಪಾರ ಮೇಳವು ದಕ್ಷಿಣ ಆಫ್ರಿಕಾದ ಮಿಡ್‌ರಾಂಡ್‌ನ ಗಲ್ಲಾಘರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.

ಬ್ರಿಕ್ಸ್‌ ದೇಶಗಳ ಉತ್ಪನ್ನಗಳ ಪ್ರದರ್ಶನ ಹಾಗೂ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಿಗೆ ಸಂಬಂಧಿಸಿದ ಸಂವಾದ ಕಾರ್ಯಕ್ರಮಗಳು ಈ ಮೇಳದಲ್ಲಿ ಇರಲಿವೆ ಎಂದು ಮೂಲಗಳು ವಿವರಿಸಿವೆ.

ಇದೇ 22 ರಿಂದ 24ರ ವರೆಗೆ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರೆಜಿಲ್‌, ಚೀನಾ, ರಷ್ಯಾ, ಮತ್ತು ದಕ್ಷಿಣ ಆಫ್ರಿಕಾದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದಿವೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ವರ್ಚುವಲ್‌ ಆಗಿ ಪಾಲ್ಗೊಳ್ಳಲಿದ್ದಾರೆ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT