ಶುಕ್ರವಾರ, ಜೂನ್ 5, 2020
27 °C

ಹೈನುಗಾರಿಕೆ ಮೆಹಲ್‌ ಕೇಜ್ರಿವಾಲ್‌ ಸಾಧನೆ

ರವಿ ಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಮೆಹಲ್‌ ಕೇಜ್ರಿವಾಲ್‌ 22ರ ಹರೆಯದ ಯುವತಿ. ಹೈನುಗಾರಿಕೆ ಅವರ ಆಸಕ್ತಿಯ ಕ್ಷೇತ್ರ. ತುಮಕೂರು ಜಿಲ್ಲೆ ಸಿರಾ ಬಳಿ 400 ಗೋವುಗಳನ್ನು ಸಾಕಿಕೊಂಡು ‘ಹೈಟೆಕ್‌’ ಎನ್ನಬಹುದಾದ ‘ಹ್ಯಾಪಿ ಮಿಲ್ಕ್‌’ ಡೇರಿ ನಡೆಸುತ್ತಿದ್ದಾರೆ.

ದಿನಕ್ಕೆ 4,000 ಲೀಟರ್‌ ಹಾಲು ಮಾರಾಟ ಮಾಡುತ್ತಿದ್ದಾರೆ. ಮೊಸರು, ತುಪ್ಪ ಮತ್ತು ಪನ್ನೀರ್‌ ಇತ್ಯಾದಿಗಳನ್ನೂ ತಯಾರಿಸುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಸಾವಯವ ಮತ್ತು ಸಿರಿಧಾನ್ಯದ ಅಂತರರಾಷ್ಟ್ರೀಯ ಮೇಳದಲ್ಲಿ ‘ಹ್ಯಾಪಿ ಮಿಲ್ಕ್‌’ ಮಳಿಗೆಯಲ್ಲಿ ನೇತು ಹಾಕಿದ್ದ ಬಲೂನಿನಿಂದ ತಯಾರಿಸಿದ ಹಾಲಿನ ಬಾಟಲಿಯ ಆಕೃತಿಯು ಮೇಳಕ್ಕೆ ಭೇಟಿ ನೀಡುವವರನ್ನು ಸೂಜಿಗಲ್ಲಿನಂತೆ ಆಕರ್ಷಣೆಯ ಕೇಂದ್ರವಾಗಿತ್ತು.

ಮೆಹಲ್‌ 2017 ರಲ್ಲಿ ‘ಹ್ಯಾಪಿ ಮಿಲ್ಕ್‌’ ಅನ್ನು ನವೋದ್ಯಮ ರೂಪದಲ್ಲಿ ಸ್ಥಾಪಿಸಿದ್ದಾರೆ. ‘ಕಲಬೆರಕೆ ಇಲ್ಲದ, ಆ್ಯಂಟಿ ಬಯಾಟಿಕ್‌ ಮುಕ್ತ ಶುದ್ಧ ಸಾವಯವ ಹಾಲನ್ನು ಗ್ರಾಹಕರಿಗೆ ನೀಡುವುದು ನನ್ನ ಗುರಿಯಾಗಿತ್ತು. ಆದ ಕಾರಣ ಡೇರಿ ಉದ್ಯಮವನ್ನು ಆರಂಭಿಸಿದ್ದೆ ’ ಎಂದು ಮೆಹಲ್‌ ಹೇಳುತ್ತಾರೆ.

ತಂತ್ರಜ್ಞಾನದ ನೆರವು: ‘ಹಸುವಿನಿಂದ ಹಾಲು ಉತ್ಪಾದನೆಗೆ ಇಸ್ರೇಲಿ ತಂತ್ರಜ್ಞಾನ ಅನುಸರಿಸಲಾಗುತ್ತಿದೆ. ಹಾಲು ಹಿಂಡಿದ ಬಳಿಕ ಪ್ಯಾಕಿಂಗ್‌ವರೆಗೆ ಜರ್ಮನ್‌ ತಂತ್ರಜ್ಞಾನ ಬಳಸಲಾಗುತ್ತಿದೆ. ಹಸುಗಳಿಗೆ ಸಾವಯವ ಮೇವು ನೀಡಲಾಗುತ್ತದೆ. ಯಾವುದೇ ಹಂತದಲ್ಲಿ ಮಾನವ ಹಸ್ತ ಸ್ಪರ್ಶ ಆಗುವುದಿಲ್ಲ. ಗಾಜಿನ ಬಾಟಲಿಯಲ್ಲಿ ಹಾಲು ತುಂಬಿ ಬೆಂಗಳೂರಿನಲ್ಲಿ ಗ್ರಾಹಕರ ಮನೆ– ಮನೆಗೆ ತಲುಪಿಸಲಾಗುತ್ತಿದೆ. ಮೊಸರನ್ನು ಮಣ್ಣಿನ ಮಡಿಕೆಗಳಲ್ಲಿ ತುಂಬಿ ಪೂರೈಕೆ ಮಾಡಲಾಗುತ್ತದೆ. ಅರ್ಧ ಲೀಟರ್‌ ಹಾಲಿಗೆ ₹33 ದರ ನಿಗದಿ ಮಾಡಲಾಗಿದೆ. ಬಾಟಲಿಯಲ್ಲಿ ಪೂರೈಕೆ ಮಾಡುವ ಒಂದು ಲೀಟರ್‌ ಹಾಲಿಗೆ ₹80. ನೇರ ಮಾರಾಟವಲ್ಲದೆ, ಆನ್‌ಲೈನ್‌ ಮೂಲಕವೂ ಮಾರಾಟ ಮಾಡಲಾಗುತ್ತದೆ. ವಹಿವಾಟು ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ಅವರು ಹೇಳುತ್ತಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.