ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ವಾರವೂ ಸೂಚ್ಯಂಕ ನಷ್ಟ

Last Updated 22 ಸೆಪ್ಟೆಂಬರ್ 2018, 18:20 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸತತ ಮೂರನೇ ವಾರವು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಕುಸಿತ ದಾಖಲಿಸಿದೆ.

ನಾಲ್ಕು ದಿನಗಳ ವಹಿವಾಟಿನಲ್ಲಿ ಸೂಚ್ಯಂಕವು ಒಟ್ಟಾರೆ 1,249 ಅಂಶಗಳಷ್ಟು ಕುಸಿತ ಕಂಡಿದೆ. ವಾರಾಂತ್ಯದಲ್ಲಿ 36,841 ಅಂಶಗಳಿಗೆ ಕುಸಿದು ಎರಡು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 11,200 ಅಂಶಗಳಿಗಿಂತ ಕೆಳಗೆ ಇಳಿದಿದೆ. 372 ಅಂಶಗಳನ್ನು ಕಳೆದುಕೊಂಡು 11,143 ಅಂಶಗಳಿಗೆ ಕುಸಿದಿದೆ.

ಡಾಲರ್‌ ಎದುರಿನ ರೂಪಾಯಿ ವಿನಿಮಯ ದರದಲ್ಲಿನ ಏರಿಳಿತ, ಅಮೆರಿಕ ಮತ್ತು ಚೀನಾದ ನಡುವಣ ವಾಣಿಜ್ಯ ಸಮರದ ಉದ್ವಿಗ್ನತೆ ಮತ್ತು ಹಣಕಾಸು ವಲಯದಲ್ಲಿನ ತುಮುಲಗಳು ಷೇರುಪೇಟೆಯ ವಹಿವಾಟಿನ ಮೇಲೆ ತೀಕ್ಷ್ಣ ಪ್ರಭಾವ ಬೀರಿವೆ.

ಹೂಡಿಕೆದಾರರು ವಾರದ ಆರಂಭದಿಂದಲೂ ಷೇರುಗಳ ಮಾರಾಟಕ್ಕೆ ಆದ್ಯತೆ ನೀಡಿದ್ದರು. ಹೀಗಾಗಿ ವಾರದ ಉದ್ದಕ್ಕೂ ಪೇಟೆಯಲ್ಲಿ ಮಾರಾಟ ಒತ್ತಡ ಕಂಡು ಬಂದಿತ್ತು. ರೂಪಾಯಿ ಬೆಲೆ ಡಾಲರ್‌ ಎದುರು 72.99ಕ್ಕೆ ಕುಸಿದಿದ್ದರಿಂದ ವಹಿವಾಟಿನ ಮೇಲೆ ವ್ಯಾಪಕ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಕಂಡು ಬಂದಿತು.

ಹಣಕಾಸು ಸಂಸ್ಥೆಗಳ ಷೇರುಗಳು ಭಾರಿ ನಷ್ಟಕ್ಕೆ ಗುರಿಯಾಗಿದ್ದರಿಂದ ಹೂಡಿಕೆದಾರರು ಆತಂಕಗೊಂಡಿದ್ದರು.
ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ ಲಿಮಿಟೆಡ್‌ ಸಾಲದ ಸುಳಿಗೆ ಸಿಲುಕಿರುವ ಸುದ್ದಿಯು ಪೇಟೆಯಲ್ಲಿನ ಪ್ರತಿಯೊಂದು ಹಣಕಾಸು ಸಂಸ್ಥೆಯ ಷೇರುಗಳ ಬೆಲೆ ಕುಸಿತಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT