ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಪೇಟೆ | ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

Published 30 ಏಪ್ರಿಲ್ 2024, 15:46 IST
Last Updated 30 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕಿಂಗ್, ಐ.ಟಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಮಂಗಳವಾರ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 188 ಅಂಶ ಇಳಿಕೆ ಕಂಡು 74,482ಕ್ಕೆ ಕೊನೆಗೊಂಡಿತು. ವಹಿವಾಟಿನ ವೇಳೆ ಸೂಚ್ಯಂಕವು 440 ಅಂಶ ಏರಿಕೆಯಾಗಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 38 ಅಂಶ ಇಳಿಕೆಯಾಗಿ 22,604ಕ್ಕೆ ಸ್ಥಿರಗೊಂಡಿತು.

ಟೆಕ್‌ ಮಹೀಂದ್ರ, ಟಾಟಾ ಸ್ಟೀಲ್‌, ಜೆಎಸ್‌ಡಬ್ಲ್ಯು, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಲಾರ್ಸೆನ್‌ ಆ್ಯಂಡ್‌ ಟೊಬ್ರೊ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯ ಇಳಿಕೆಯಾಗಿದೆ. 

ಮಹೀಂದ್ರ ಆ್ಯಂಡ್‌ ಮಹೀಂದ್ರ, ಪವರ್‌ಗ್ರಿಡ್‌, ಬಜಾಜ್‌ ಫೈನಾನ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಮಾರುತಿ ಷೇರು ಗಳಿಕೆ ಕಂಡಿವೆ.

ಟಾಟಾ ಕೆಮಿಕಲ್ಸ್‌ ಷೇರು ಇಳಿಕೆ:

ಟಾಟಾ ಕೆಮಿಕಲ್ಸ್‌ ಲಿಮಿಟೆಡ್‌ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹818 ಕೋಟಿ ನಿವ್ವಳ ನಷ್ಟ ಕಂಡಿದೆ. ಇದರಿಂದ ಕಂಪನಿಯ ಷೇರಿನ ಮೌಲ್ಯ ಶೇ 2ರಷ್ಟು ಇಳಿಕೆಯಾಗಿದೆ.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ₹1,072ಕ್ಕೆ ಕುಸಿದಿದೆ. ದಿನದ ವಹಿವಾಟಿನ ಒಂದು ಸಂದರ್ಭದಲ್ಲಿ ಷೇರಿನ ಮೌಲ್ಯ ಶೇ 4.5ರಷ್ಟು ಇಳಿಕೆಯಾಗಿತ್ತು.

ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಷೇರು ಏರಿಕೆ:

ಮಾರ್ಚ್‌ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಹೆಚ್ಚು ಲಾಭಗಳಿಸಿರುವುದರಿಂದ ಷೇರಿನ ಮೌಲ್ಯ ಶೇ 20ರಷ್ಟು ಏರಿಕೆಯಾಗಿದೆ.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ಕ್ರಮವಾಗಿ ₹599 ಮತ್ತು ₹600ಕ್ಕೆ ಏರಿಕೆಯಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹1,043 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್‌ ₹6,264 ಕೋಟಿಗೆ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT