ಮಂಗಳವಾರ, ಜೂನ್ 28, 2022
21 °C

ಬಿಎಚ್‌ಇಎಲ್‌ ಲಾಭ ₹ 912 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಚ್‌ಇಎಲ್‌, 2022ರ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 912 ಕೋಟಿ ನಿವ್ವಳ ಲಾಭ ಗಳಿಸಿದೆ. ವರಮಾನದಲ್ಲಿ ಏರಿಕೆ ಆಗಿರುವುದರಿಂದ ನಿವ್ವಳ ಲಾಭ ಸಾಧ್ಯವಾಗಿದೆ ಎಂದು ಕಂಪನಿಯು ತಿಳಿಸಿದೆ.

2020–21ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹ 1,036 ಕೋಟಿ ನಷ್ಟ ಆಗಿತ್ತು ಎಂದು ಷೇರುಪೇಟೆಗೆ ಶನಿವಾರ ಮಾಹಿತಿ ನೀಡಿದೆ.

2022ರ ಜನವರಿ–ಮಾರ್ಚ್‌ ಅವಧಿಯಲ್ಲಿ ಕಂಪನಿಯ ವರಮಾನ ₹ 8,181 ಕೋಟಿಗೆ ತಲುಪಿದೆ. 2021ರ ಜನವರಿ–ಮಾರ್ಚ್‌ ಅವಧಿಯಲ್ಲಿ ವರಮಾನವು ₹ 7,245 ಕೋಟಿ ಇತ್ತು. ವೆಚ್ಚವು ₹ 8,744 ಕೋಟಿಯಿಂದ ₹ 7,091 ಕೋಟಿಗೆ ಇಳಿಕೆ ಆಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.