ಗುರುವಾರ , ಮೇ 28, 2020
27 °C

ಹಣಕಾಸು ಸಾಕ್ಷರತೆ| ಶ್ರೀಮಂತಿಕೆ ಅಳೆಯುವ ‘ನೆಟ್‌ವರ್ತ್‌’

ಕ್ಲಿಯೋನ್ ಡಿಸೋಜ Updated:

ಅಕ್ಷರ ಗಾತ್ರ : | |

’ಬಿಸಿನೆಸ್‌ಮೆನ್‌ಗಳ ವಿಚಾರ ಬಿಡಿ. ಅವರೆಲ್ಲಾ ಹೈ ನೆಟ್‌ವರ್ತ್ ಇರೋ ಮಂದಿ. ನನ್ನ ಸ್ನೇಹಿತನೊಬ್ಬ ಇದ್ದಾನೆ. ಆತನ ನೆಟ್‌ ವರ್ತ್ ಕೂಡ ಜಾಸ್ತಿ ಇದೆ‘... ಹೀಗೆ ಮಾತುಕತೆಯ ನಡುವೆ ಒಂದಲ್ಲ ಒಂದು ಬಾರಿ ಅನೇಕರ ಕಿವಿಯಲ್ಲಿ ‘ನೆಟ್‌ವರ್ತ್‌’ ಎನ್ನುವ ಪದ ನುಸುಳಿ ಹೋಗಿರುತ್ತದೆ. ನೆಟ್‌ವರ್ತ್ ಎನ್ನುವುದು ನಮ್ಮ ಪ್ರಸ್ತುತ ಆರ್ಥಿಕ ಸ್ಥಿತಿ  ತಿಳಿಸಿಕೊಡುವ ಅಳತೆಗೋಲು. ನೆಟ್‌ವರ್ತ್ ಅಳೆಯುವುದು  ಹೇಗೆ, ಯಾವೆಲ್ಲಾ ಸಂಗತಿಗಳನ್ನು ನೆಟ್‌ವರ್ತ್ ಲೆಕ್ಕಾಚಾರದಲ್ಲಿ ಗಮನಿಸಿಕೊಳ್ಳಬೇಕು ಎನ್ನುವ ಕುರಿತ ಮಾಹಿತಿ ಇಲ್ಲಿದೆ.


 ಕ್ಲೆಯಾನ್‌ ಡಿಸೋಜ

ನೆಟ್‌ವರ್ತ್‌ ಎಂದರೇನು?: ವ್ಯಕ್ತಿಯೊಬ್ಬನ ಒಟ್ಟು ಆಸ್ತಿಗಳ ಮೌಲ್ಯದಲ್ಲಿ ಆತನ ಸಾಲಗಳು ಮತ್ತು ಇನ್ನಿತರ ಬಾಧ್ಯತೆಗಳನ್ನು ಕಳೆದಾಗ ನೆಟ್‌ವರ್ತ್‌ (ನಿವ್ವಳ ಸಂಪತ್ತು) ಲಭ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ ನೀವು ಮಾಡಿರುವ ಸಾಲಗಳ ಹೊಣೆಗಾರಿಕೆ ಕಳೆದು ಇನ್ನುಳಿದ ನಿಮ್ಮ ಆಸ್ತಿಯ ಮೌಲ್ಯವೇ ನೆಟ್‌ವರ್ತ್‌. ನಿಮ್ಮ ಆಸ್ತಿ ಎಷ್ಟಿದೆ. ನೀವು ಎಷ್ಟು ಸಾಲ ಮಾಡಿದ್ದೀರಿ. ಆಸ್ತಿಯ ಮೌಲ್ಯಕ್ಕಿಂತ ನಿಮ್ಮ ಸಾಲಗಳ ಪ್ರಮಾಣವೇ ಹೆಚ್ಚಿಗೆ ಇದೆಯೇ ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಿಮ್ಮಲ್ಲಿ ಆರ್ಥಿಕ ಶಿಸ್ತು ಮೂಡಿಸಲು ನೆಟ್‌ವರ್ತ್‌ ಲೆಕ್ಕಾಚಾರ ಪೂರಕ.

ನೆಟ್‌ವರ್ತ್‌ ಲೆಕ್ಕ ಹಾಕಲು ಸೂತ್ರ : ಆಸ್ತಿಗಳ ಒಟ್ಟು ಮೌಲ್ಯ – ಒಟ್ಟು ಸಾಲಗಳು ಮತ್ತು ಬಾಧ್ಯತೆಗಳು = ನೆಟ್‌ವರ್ತ್‌

ನಿಮ್ಮ ಒಟ್ಟು ಆಸ್ತಿಗಳ ಲೆಕ್ಕಾಚಾರ ಮಾಡಿ: ನಿಮ್ಮ ಮನೆಯ ಮೌಲ್ಯ, ರಿಯಲ್ ಎಸ್ಟೇಟ್ ಹೂಡಿಕೆಗಳು, ಕಾರು, ದ್ವಿಚಕ್ರ ವಾಹನ, ಬಿಸಿನೆಸ್ ಇದ್ದರೆ ಅದರ ಮೌಲ್ಯ, ಚಿನ್ನ, ನಗದು, ಬ್ಯಾಂಕ್ ಠೇವಣಿ, ಇನ್ಶುರೆನ್ಸ್ , ಷೇರುಗಳು, ಮ್ಯೂಚುವಲ್ ಫಂಡ್ ಹೂಡಿಕೆಗಳು, ಇತರೆ ಹೂಡಿಕೆಗಳನ್ನು ಒಟ್ಟು ಆಸ್ತಿ ಮೌಲ್ಯ ಲೆಕ್ಕ ಹಾಕುವಾಗ ಪರಿಗಣಿಸಬೇಕು.

ನಿಮ್ಮ ಒಟ್ಟು ಸಾಲಗಳು/ ಬಾಧ್ಯತೆಗಳ ಪಟ್ಟಿ ಮಾಡಿ: ನೆಟ್‌ವರ್ತ್‌ ಲೆಕ್ಕಾಚಾರ ಮಾಡುವಾಗ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಬಿಸಿನೆಸ್ ಸಾಲ, ವೈಯಕ್ತಿಕ ಸಾಲ ಹಾಗೂ ಇನ್ನಿತರ ಸಾಲಗಳ ಪಟ್ಟಿ ಮಾಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು