ಭಾನುವಾರ, ಸೆಪ್ಟೆಂಬರ್ 26, 2021
24 °C

ಮತ್ತೆ 740 ಅಂಶ ಕುಸಿದ ಸೆನ್ಸೆಕ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್–19 ಪ್ರಕರಣಗಳು ದೇಶದಲ್ಲಿ ಮತ್ತೆ ಹೆಚ್ಚಾಗುತ್ತಿರುವುದು ಹಾಗೂ ಅಲ್ಲಲ್ಲಿ ಲಾಕ್‌ಡೌನ್‌ ಜಾರಿಯಾಗಿರುವುದು ಷೇರುಪೇಟೆಯಲ್ಲಿ ಆತಂಕಕ್ಕೆ ಕಾರಣವಾದವು. ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾದ ಪರಿಣಾಮವಾಗಿ ಸೂಚ್ಯಂಕಗಳು ಕುಸಿತ ಕಂಡವು.

ಜಾಗತಿಕ ಮಟ್ಟದಲ್ಲಿ ಕೂಡ ಷೇರುಪೇಟೆಗಳ ವಹಿವಾಟು ಉತ್ಸಾಹದಾಯಕ ಆಗಿರಲಿಲ್ಲ. ಇದು ಕೂಡ ದೇಶಿ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿತು. ಬಿಎಸ್‌ಇ ಸೆನ್ಸೆಕ್ಸ್ 740 ಅಂಶ ಇಳಿಕೆ ಕಂಡಿತು. ನಿಫ್ಟಿ 224 ಅಂಶ ಕುಸಿಯಿತು.

ಸೆನ್ಸೆಕ್ಸ್‌ನಲ್ಲಿ ಡಾ ರೆಡ್ಡೀಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಎಲ್‌ಆ್ಯಂಡ್‌ಟಿ ಮಾತ್ರ ಏರಿಕೆ ದಾಖಲಿಸಿದವು. ‘ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವುದು ಮಾರುಕಟ್ಟೆಯಲ್ಲಿ ನಿರಾಸೆಯ ವಾತಾವರಣ ಮೂಡಿಸಿದೆ. ಭಾರಿ ರ್‍ಯಾಲಿ ಕಂಡಿದ್ದ ಮಾರುಕಟ್ಟೆಯು ಒಂದು ತಿಂಗಳಿನಿಂದ ತುಸು ಇಳಿಕೆಯ ಹಾದಿಯಲ್ಲಿ ಇತ್ತು. ಕೋವಿಡ್ ಪ್ರಕರಣಗಳು ಜಾಸ್ತಿಯಾಗಿದ್ದು ಈ ಇಳಿಕೆಗೆ ವೇಗ ನೀಡಿದೆ’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಗುರುವಾರ ಶೇಕಡ 1.35ರಷ್ಟು ಇಳಿಕೆ ಆಗಿದ್ದು, ತೈಲವು ಪ್ರತಿ ಬ್ಯಾರೆಲ್‌ಗೆ 63.54 ಅಮೆರಿಕನ್ ಡಾಲರ್‌ಗೆ ಮಾರಾಟವಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏಳು ಪೈಸೆ ಇಳಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು